Home ತಾಜಾ ಸುದ್ದಿ ಖ್ಯಾತ ಉದ್ಯಮಿ ಉಪೇಂದ್ರ ಕಾಮತ್ ನಿಧನ

ಖ್ಯಾತ ಉದ್ಯಮಿ ಉಪೇಂದ್ರ ಕಾಮತ್ ನಿಧನ

0

ಮಂಗಳೂರು: ಸುಳ್ಯದ ಹಿರಿಯ ಉದ್ಯಮಿ ಸಾಮಾಜಿಕ, ರಾಜಕೀಯ ಧುರೀಣ ಎಲ್ಲಾರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಉಪೇಂದ್ರ ಕಾಮತ್ ನಿಧನ ಹೊಂದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿವಿ ‌ಸದಾನಂದ ಗೌಡ: ದಕ ಜಿಲ್ಲೆ ಸುಳ್ಯ ತಾಲೂಕು ಅಡ್ಕಾರ್ ಎಂಬಲ್ಲಿ ಗೇರುಬೀಜದ ಫ್ಯಾಕ್ಟರಿ ತೆರೆದು ಸ್ಥಳೀಯ ಹಲವಾರು ಜನರಿಗೆ ಉದ್ಯೋಗವನ್ನು ಕೊಟ್ಟು ಅವರ ಕುಟುಂಬಕ್ಕೆ ಆಸರೆ ಆಗಿದ್ದ ಶ್ರೀ ಉಪೇಂದ್ರ ಕಾಮತ್ ಅವರು ದೈವಾಧೀನವಾಗಿದ್ದಾರೆ. ದೇವರು ಇವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದಿದ್ದಾರೆ.


ನಳಿನ್ ಕುಮಾರ್ ಕಟೀಲ್: ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಮುಂದಾಳು, ಸುಳ್ಯದಲ್ಲಿ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿ ಅಸಂಖ್ಯಾತ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ್ದ, ನಮ್ಮೆಲ್ಲರ ಹಿರಿಯರಾದ ಶ್ರೀ ಕೆ ಉಪೇಂದ್ರ ಕಾಮತ್ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬಕ್ಕೆ, ಬಂಧು ಬಳಗಕ್ಕೆ, ಅಪಾರ ಹಿತೈಷಿಗಳಿಗೆ ಈ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Exit mobile version