Home ತಾಜಾ ಸುದ್ದಿ ಖಾಸಗಿ ಶಾಲಾ ಬಸ್‌ ಡಿಕ್ಕಿ: ಶಿಕ್ಷಕ ಸಾವು

ಖಾಸಗಿ ಶಾಲಾ ಬಸ್‌ ಡಿಕ್ಕಿ: ಶಿಕ್ಷಕ ಸಾವು

0

ವಿಜಯನಗರ: ಖಾಸಗಿ ಶಾಲಾ ಬಸ್ ಡಿಕ್ಕಿಯಾಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ತಾಲ್ಲೂಕಿನ ಕೊಟ್ಟೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೊಟ್ಟೂರಿನಿಂದ ಕೂಡ್ಲಿಗಿ ಕಡೆಗೆ ಸಾಗುತ್ತಿದ್ದ ಶಿಕ್ಷಕರ ಬೈಕ್‌ಗೆ ಕುಪ್ಪಿನಕರೆ ಕ್ರಾಸ್ ಬಳಿ ಖಾಸಗಿ ಶಾಲಾ ಬಸ್ ಡಿಕ್ಕಿಯಾಗಿದ್ದು, ಇದರಿಂದ ಶಿಕ್ಷಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಕೆ.ಮುನಿಯಪ್ಪ(56) ಮೃತ ಶಿಕ್ಷಕ. ಅಮ್ಮನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿ ಮೇಲ್ವಿಚಾರಣೆಗೆ ನೇಮಕ ಗೊಂಡಿದ್ದರು.

Exit mobile version