Home News ಕೋಲಾರದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ

ಕೋಲಾರದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ

ಕೋಲಾರ: ಸರ್ವೇ ಸೂಪರ್ವೈಸರ್ ಸುರೇಶ್ ಬಾಬು ಮನೆ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿನಡೆದಿದೆ.
ಸುರೇಶ್ ಬಾಬು ಅವರಿಗೆ ಸೇರಿದ ಕೋಲಾರ ನಗರದ ಮನೆ, ಮಾಲೂರು ಮನೆ, ನಿಡಗಟ್ಟ ಮನೆ, ಕಚೇರಿಗಳು ಸೇರಿ ಒಟ್ಟು 6 ಕಡೆ ಲೋಕಾಯುಕ್ತ ಎಸ್ಪಿ ಧನಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.
ಅಕ್ರಮವಾಗಿ ಸರ್ಕಾರಿ ದಾಖಲೆಗಳನ್ನು ತಿದ್ದಿ ಸರ್ಕಾರಿ ಭೂಮಿ ಕಬಳಿಕೆ ಹಿನ್ನೆಲೆ ಹಾಗೂ ಕೋಟ್ಯಾಂತರ ರೂಪಾಯಿ ಆಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿನಿಂದಲೂ ದಾಳಿಗೆ ಸಿಬ್ಬಂದಿ ಬಳಕೆ ಮಾಡಿ, ಲೋಕಾಯುಕ್ತರು ದಾಳಿನಡೆಸಿದ್ದಾರೆ, ಕೋಲಾರ ಮನೆ, ಮಾಲೂರು ಪಟ್ಟಣ ಮನೆ, ನಿಡಘಟ್ಟ ಗ್ರಾಮದ ಮನೆ, ಕಚೇರಿ ಸೇರಿ ಒಟ್ಟು ಆರು ಕಡೆ ಲೋಕ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Exit mobile version