Home ತಾಜಾ ಸುದ್ದಿ ಕೊನೆಗೂ ವಿಸ್ಮಯ ಮದುವೆ..

ಕೊನೆಗೂ ವಿಸ್ಮಯ ಮದುವೆ..

0

ಮಂಗಳೂರು: ತಂದೆ-ತಾಯಿ, ಹಿಂದೂ ಸಂಘಟನೆಗಳ ಪ್ರತಿಭಟನೆ, ಹೋರಾಟದ ಬಳಿಕವೂ ಮನೆ ಬಿಟ್ಟು ಹೋದ ಹಿಂದೂ ಯುವತಿ, ತಾನು ಪ್ರೇಮಿಸಿದ ಕೇರಳದ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾಳೆ. ಕ್ರಿಮಿನಲ್ ಆರೋಪ ಹೊಂದಿರುವ ಈತ ಲವ್ ಜಿಹಾದ್‌ನಲ್ಲಿ ತೊಡಗಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ತಂದೆ- ತಾಯಿ ಎಷ್ಟೇ ಒತ್ತಾಯಿಸಿದರೂ, ಹಿಂದೂ ಸಂಘಟನೆಗಳು ಹೋರಾಡಿದರೂ ಹಿಂದೂ ಯುವತಿ ವಿಸ್ಮಯ, ತನ್ನ ಪ್ರೇಮಿ ಮೊಹಮ್ಮದ್ ಅಶ್ಫಾಕ್‌ನನ್ನು ಮದುವೆಯಾಗಿದ್ದಾಳೆ. ಕೇರಳ ಹೈಕೋರ್ಟ್ ಇವರ ಮದುವೆಗೆ ಹಸಿರು ನಿಶಾನೆ ನೀಡಿದೆ.


ಕಾನೂನು ಹೋರಾಟದ ಮೂಲಕ ಮಗಳನ್ನು ವಾಪಸ್ ಕರೆತರುವುದಾಗಿ ವಿಸ್ಮಯ ತಂದೆಗೆ ವಿಹಿಂಪ ಭರವಸೆ ನೀಡಿತ್ತು. ವಿಸ್ಮಯಳನ್ನು ಮಂಗಳೂರಿನ ಕೌನ್ಸೆಲಿಂಗ್ ಸೆಂಟರ್‌ಗೆ ವಿಸ್ಮಯಳನ್ನು ಕಳುಹಿಸಿತ್ತು. ಆದರೆ ಮೊಹಮ್ಮದ್ ಅಶ್ಫಾಕ್ ಕೇರಳ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದ. ಕೇರಳ ಹೈಕೋರ್ಟ್ ಆಕೆಯನ್ನು ಕರೆತರುವಂತೆ ಆದೇಶ ನೀಡಿತ್ತು. ಹೀಗಾಗಿ ಅಶ್ಫಾಕ್ ಜೊತೆ ತೆರಳಿ ವಿಸ್ಮಯ ವಿವಾಹವಾಗಿದ್ದಾಳೆ.
ಯುವತಿಯ ಮನವೊಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯ ತಂದೆ ವಿನೋದ್ ಬಳಿ ಕ್ಷಮೆ ಕೋರಿದ್ದಾರೆ.
ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿಯಾಗಿರುವ ವಿಸ್ಮಯಿ ಅಶ್ಫಾಕ್ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇದ್ದುಕೊಂಡು ಮಂಗಳೂರಿನಲ್ಲಿ ಬಿಸಿಎ ಶಿಕ್ಷಣ ಪಡೆಯುತ್ತಿದ್ದ ವಿಸ್ಮಯಳನ್ನು ಕಾಸರಗೋಡಿನ ವಿದ್ಯಾನಗರದಲ್ಲಿದ್ದಾಗಲೇ ಅಶ್ಫಾಕ್ ಪ್ರೀತಿಸುತ್ತಿದ್ದ, ಈತನ ವಿರುದ್ಧ ಅಪರಾಧ ದಾಖಲೆಗಳಿವೆ.
ಕಳೆದ ಜೂ.೬ ರಂದು ಉಳ್ಳಾಲದಿಂದ ವಿಸ್ಮಯಳನ್ನು ಈತ ಕರೆದುಕೊಂಡು ಹೋಗಿದ್ದ. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಈಕೆಯನ್ನು ಪತ್ತೆ ಹಚ್ಚಿ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ.೩೦ರಂದು ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದ. ಈ ಬಗ್ಗೆ ವಿಸ್ಮಯಳ ತಂದೆ ವಿನೋದ್ ಉಳ್ಳಾಲ ಠಾಣೆಗೆ ಅಪಹರಣ ದೂರು ನೀಡಿದ್ದರು. ಬಳಿಕ ವಿದ್ಯಾನಗರ ಪೊಲೀಸರು ಪತ್ತೆ ಹಚ್ಚಿ ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿ ಇರಿಸಿದ್ದರು. ಆದರೆ ಅಶ್ಫಾಕ್ ಜೊತೆಗೆ ತೆರಳುವುದಾಗಿ ವಿಸ್ಮಯ ಹಠ ಹಿಡಿದಿದ್ದಳು.

Exit mobile version