Home ನಮ್ಮ ಜಿಲ್ಲೆ ಕುಡಿವ ನೀರಿಗಾಗಿ ಪಂಚಾಯತಿ ಮುಂದೆ ಪ್ರತಿಭಟನೆ

ಕುಡಿವ ನೀರಿಗಾಗಿ ಪಂಚಾಯತಿ ಮುಂದೆ ಪ್ರತಿಭಟನೆ

0

ಇಳಕಲ್: ತಾಲೂಕಿನ ನಂದವಾಡಗಿ ಗ್ರಾಮದ ಪಂಚಾಯತಿ ಕಚೇರಿಯ ಮುಂದೆ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸೋಮವಾರದಂದು ಪ್ರತಿಭಟನೆ ನಡೆಸಿದರು.
ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಈ ಪ್ರತಿಭಟನೆಯಲ್ಲಿ ಕುಡಿಯುವ ನೀರು ಸಿಗದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ ಯಾವುದೇ ಮೂಲದಿಂದಾರೂ ಕುಡಿಯುವ ನೀರು ಪೂರೈಕೆ ಮಾಡಿ ಎಂದು ಮಹಿಳೆಯರು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಜಿಲ್ಲಾಡಳಿತ ಯಾವುದೇ ಭಾಗದಲ್ಲಿ ಕುಡಿಯುವ ನೀರು ಸಿಗದೇ ಜನ ಜಾನವಾರು ಇರದಂತೆ ನೋಡಿ ಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ ಪಂಚಾಯತಿ ಅಧಿಕಾರಿಗಳು ಕಣ್ಣು ಕಿವಿ ಮುಚ್ಚಿಕೊಂಡು ಕುಳಿತಿದ್ದಾರೆ ಶಿವು ಹೇಳಿದರು.

Exit mobile version