Home ಅಪರಾಧ ಕುಖ್ಯಾತ ರೌಡಿ ಚೈಲ್ಡ್‌ರವಿ ಬರ್ಬರ ಹತ್ಯೆ

ಕುಖ್ಯಾತ ರೌಡಿ ಚೈಲ್ಡ್‌ರವಿ ಬರ್ಬರ ಹತ್ಯೆ

0

ಹಾಸನ: ಕುಖ್ಯಾತ ರೌಡಿಶೀಟರ್ ಚೈಲ್ಡ್ ರವಿಯನ್ನು ದುಷ್ಕರ್ಮಿಗಳು ಇಂದು ಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ನಗರದ ಹೇಮಾವತಿ ನಗರ ಬಡಾವಣೆಯಲ್ಲಿ ಕುಡಿಯುವ ನೀರು ತರಲೆಂದು ದ್ವಿ ಚಕ್ರ ವಾಹನದಲ್ಲಿ ಹೊರಟಿದ್ದ ರವಿಯನ್ನು ಹಿಂದಿನಿಂದ ವಾಹನ ಢಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ತಪ್ಪಿಸಿಕೊಳ್ಳಲು ಅವಕಾಶವೇ ಸಿಗದಂತೆ ದಾಳಿ ನಡೆಸಿದ ಇಬ್ಬರು ದುಷ್ಕರ್ಮಿಗಳ ಮಾರಕಾಸ್ತ್ರಗಳ ದಾಳಿಯಿಂದ ರವಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ, ಕೊಲೆಯಾದ ರವಿಯ ವಿರುದ್ಧ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿದ್ದು. ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

Exit mobile version