Home ಅಪರಾಧ ಕಿಡಿಗೇಡಿಗಳಿಂದ ಜಗದೀಶ ಶೆಟ್ಟರ ಫೇಸ್‌ಬುಕ್ ಹ್ಯಾಕ್

ಕಿಡಿಗೇಡಿಗಳಿಂದ ಜಗದೀಶ ಶೆಟ್ಟರ ಫೇಸ್‌ಬುಕ್ ಹ್ಯಾಕ್

0

ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಫೇಸ್‌ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಶೆಟ್ಟರ ಅವರ ಕಚೇರಿಯ ಮೂಲಗಳು ಮಾಹಿತಿ ನೀಡಿದ್ದು, ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ. ಯಾರೂ ಕೂಡಾ ಹಣ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ನಾನು ಮಾಡಿದ ಆನ್‌ಲೈನ್ ವ್ಯವಹಾರದಲ್ಲಿ ಆರಂಭದಲ್ಲಿಯೇ ೭.೫೦ ಲಕ್ಷ ಲಾಭ ಬಂದಿದೆ. ನೀವು ಸಹ ವ್ಯವಹಾರ ನಡೆಸಿ ಲಾಭ ಪಡೆದುಕೊಳ್ಳಿರಿ. ಕ್ರಿಸ್ಟಿನಾ ಪೆನಾಟೆ ಎಂಬುವರ ಸಲಹೆ ಪಡೆಯಬಹುದು ಎಂದು ಕಿಡಿಗೇಡಿಗಳು ಪೋಸ್ಟ್ ಮಾಡಿದ್ದಾರೆ. ದುಷ್ಕರ್ಮಿಗಳ ಕೃತ್ಯ ಖಂಡಿಸಿರುವ ಶೆಟ್ಟರ ಅವರ ಪುತ್ರ ಸಂಕಲ್ಪ ಶೆಟ್ಟರ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ತ್ವರಿತ ಕ್ರಮ ಜರುಗಿಸಲು ಕೋರಿದ್ದಾರೆ.

Exit mobile version