Home ತಾಜಾ ಸುದ್ದಿ ಕಾಶ್ಮೀರ ಶೈವಿಸಂನ ವಿದ್ವಾಂಸ ಡಾ. ಮಾರ್ಕ್ ಡಿಕ್ಝ್ಕೋವ್ಸ್ಕಿ ನಿಧನ

ಕಾಶ್ಮೀರ ಶೈವಿಸಂನ ವಿದ್ವಾಂಸ ಡಾ. ಮಾರ್ಕ್ ಡಿಕ್ಝ್ಕೋವ್ಸ್ಕಿ ನಿಧನ

0

ನವದೆಹಲಿ: ಸಂಗೀತಗಾರ, ಕಾಶ್ಮೀರ ಶೈವಿಸಂನ ಗೌರವಾನ್ವಿತ ವಿದ್ವಾಂಸ ಡಾ. ಮಾರ್ಕ್ ಡಿಕ್ಝ್ಕೋವ್ಸ್ಕಿ(74) ಇಂದು ನಿಧನರಾದರು.
ಮಾರ್ಕ್ ಡಿಕ್ಝ್ಕೋವ್ಸ್ಕಿ 29 ಆಗಸ್ಟ್ 1951ರಂದು ಲಂಡನ್‌ನಲ್ಲಿ ಪೋಲಿಷ್ ತಂದೆ ಮತ್ತು ಇಟಾಲಿಯನ್ ತಾಯಿಗೆ ಜನಿಸಿದರು. 14ನೇ ವಯಸ್ಸಿನಲ್ಲಿ ಅವರು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಪರಮಹಂಸ ಯೋಗಾನಂದರ ಕೃತಿಗಳ ಅಧ್ಯಯನದಲ್ಲಿ ತೊಡಗಿದರು. ಜತೆಗೆ ಸಿತಾರ್ ಅಭ್ಯಾಸವನ್ನೂ ಪ್ರಾರಂಭಿಸಿದರು. ಹಾಗೆಯೇ ಭಗವದ್ಗೀತೆ ಮತ್ತು ಲಂಕಾವತಾರ ಸೂತ್ರವನ್ನು ಓದಿ 17ನೇ ವಯಸ್ಸಿನಲ್ಲಿ ಶಾಲೆಯನ್ನು ಮುಗಿಸಿದ ನಂತರ, 18ನೇ ವಯಸ್ಸಿಗೆ ಭಾರತಕ್ಕೆ ಪ್ರಯಾಣ ಬೆಳೆಸಿದರು.
ದೆಹಲಿಯ ಗುರು ಲಕ್ಷ್ಮಣ ಜೂ ಅವರ ಆಶ್ರಮಕ್ಕೆ ಅವರು ಭೇಟಿ ನೀಡಿದರು ಮತ್ತು ಆರು ತಿಂಗಳ ಕಾಲ ಅಲ್ಲಿಯೇ ಇದ್ದರು. 1970ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ 19ನೇ ವಯಸ್ಸಿನಲ್ಲಿ ಸೇರಿಕೊಂಡರು. ಅಲ್ಲಿ 1971ರಲ್ಲಿ ಪಂಡಿತ್ ಹೇಮಂತ ಚಕ್ರವರ್ತಿ ಅವರನ್ನು ಭೇಟಿಯಾದರು. ಅವರ ಮಾರ್ಗದರ್ಶನದಲ್ಲಿ ಸಂಸ್ಕೃತ, ತತ್ವಶಾಸ್ತ್ರ ಮತ್ತು ತಂತ್ರವನ್ನು ಅಧ್ಯಯನ ಮಾಡಿದರು, ಜೊತೆಗೆ ಬುಧಾದಿತ್ಯ ಮುಖರ್ಜಿ ಅವರಿಂದ ಸಿತಾರ್ ಕಲಿತರು.
1974ರ ಹೊತ್ತಿಗೆ ಡಿಕ್ಝ್ಕೋವ್ಸ್ಕಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಭಾರತೀಯ ತತ್ವಶಾಸ್ತ್ರ ಮತ್ತು ಧರ್ಮದಲ್ಲಿ ಬಿಎ ಮತ್ತು ಎಂಎ ಪದವಿಗಳನ್ನು ಪಡೆದರು. 1979ರ ಕೊನೆಯಲ್ಲಿ ಪಿಎಚ್‌ಡಿ ಪಡೆದ ನಂತರ ಡಿಕ್ಝ್ಕೋವ್ಸ್ಕಿ ಭಾರತಕ್ಕೆ ಮರಳಿದರು. ಅವರು ಹಲವಾರು ಭಾಷಾಂತರಗಳು ಮತ್ತು ವ್ಯಾಖ್ಯಾನಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ 12-ಸಂಪುಟಗಳ ಮಂಥನಭೈರವ ತಂತ್ರ ಮತ್ತು 11 ಸಂಪುಟಗಳ ತಂತ್ರಲೋಕವಿದ್ದು ಅದರಲ್ಲಿ ಜಯರಥನ ವ್ಯಾಖ್ಯಾನವೂ ಇದೆ. ಸಿತಾರ್‌ಗಾಗಿ 1,500ಕ್ಕೂ ಹೆಚ್ಚು ಚೀಜ್‌ಗಳನ್ನು ರಚಿಸಿದ್ದಾರೆ.

Exit mobile version