Home News ಕಾಮೇನಹಳ್ಳಿ ಜಲಪಾತದಲ್ಲಿ ಬಿದ್ದು ಯುವಕ ಸಾವು

ಕಾಮೇನಹಳ್ಳಿ ಜಲಪಾತದಲ್ಲಿ ಬಿದ್ದು ಯುವಕ ಸಾವು

ಚಿಕ್ಕಮಗಳೂರು: ಸಮೀಪದ ಕಾಮೇನಹಳ್ಳಿ ಜಲಪಾತದಲ್ಲಿ ಈಜಲು ಹೋಗಿದ್ದ ಯುವಕ ಬಂಡೆಗೆ ತಲೆ ತಗುಲಿ ಮೃತಪಟ್ಟಿದ್ದಾನೆ.
ಮೃತಪಟ್ಟ ಯುವಕನನ್ನು ನಗರದ ಚೇತನ್(18) ಎಂದು ಗುರುತಿಸಲಾಗಿದೆ. ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಶಿಕ್ಷಕರ ಗೈರು ಹಿನ್ನೆಲೆಯಲ್ಲಿ ತರಗತಿಗೆ ರಜೆ ಇದ್ದ ಕಾರಣ ಚೇತನ್ ಸ್ನೇಹಿತರ ಜೊತೆ ಕಾಮೇನಹಳ್ಳಿ ಫಾಲ್ಸ್‌ಗೆ ತೆರಳಿದ್ದನು.
ಕಲ್ಲು ಬಂಡೆಯ ಮೇಲಿನಿಂದ ನೀರಿಗೆ ಜಿಗಿದ ಪರಿಣಾಮ ಚೇತನ್ ದೇಹ ಬಂಡೆ ಕಲ್ಲಿಗೆ ಬಡಿದು ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಫಾಲ್ಸ್‌ನಿಂದ ಚೇತನ್ ಮೃತದೇಹ ಮೇಲೆತ್ತಿದೆ. ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೇನಹಳ್ಳಿ ಜಲಪಾತವು ಚಿಕ್ಕಮಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿದ್ದು, ಈ ಜಲಪಾತವು ಸುಮಾರು ೭೦-೯೦ ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ, ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಈಜಲು ಹೋಗುವುದು ಅಪಾಯಕಾರಿಯಾಗಿದೆ. ಈ ಹಿಂದೆ ೨೦೨೪ರ ನವೆಂಬರ್‌ನಲ್ಲಿ ಬೆಂಗಳೂರಿನ ಟೆಕ್ಕಿ ಅಮಿತ್‌ಕುಮಾರ್ ಹೆಬ್ಬೆ ಜಲ ಪಾತದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿತ್ತು.

Exit mobile version