Home ನಮ್ಮ ಜಿಲ್ಲೆ ಗದಗ ಕಾಣೆಯಾದ ಸದಸ್ಯರು ಪಟ್ಟಣ ಪಂಚಾಯತಿಯಲ್ಲಿ ಧೀಡಿರ ಪ್ರತ್ಯಕ್ಷ

ಕಾಣೆಯಾದ ಸದಸ್ಯರು ಪಟ್ಟಣ ಪಂಚಾಯತಿಯಲ್ಲಿ ಧೀಡಿರ ಪ್ರತ್ಯಕ್ಷ

0

ನರೇಗಲ್ಲ : ಪಟ್ಟಣ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಸೆ. ೨ರಂದು ನಿಗದಿಯಾದ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಬಿಜೆಪಿಯ ೬ ಸದಸ್ಯರು ನಾಪತ್ತೆಯಾಗಿದ್ದರು.
ಸಂಪರ್ಕಕ್ಕೆ ಸಿಗದ ಆರು ಜನ ಸದಸ್ಯರಲ್ಲಿ ಇಬ್ಬರು ಸೋಮವಾರ ಬೆಳಿಗ್ಗೆ 10:40 ಕ್ಕೆ ಪಟ್ಟಣ ಪಂಚಾಯತಿಗೆ ಕಾಂಗ್ರೆಸ್ ಮುಖಂಡರ ಜತೆಗೆ ದೌಡಾಯಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಫಕೀರಪ್ಪ ಮಳ್ಳಿ, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಕೋರಧಾನ್ಯಮಠ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಯಲ್ಲಿ ಬಂದ ಬಿಜೆಪಿ ಪಕ್ಷದ ಸದಸ್ಯರಾದ ಫಕೀರಪ್ಪ ಮಳ್ಳಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧಿಕಾರಿ, ಗಜೇಂದ್ರಗಡ ತಹಶಿಲ್ದಾರ ಕಿರಣ ಕುಲಕರ್ಣಿ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ಬಿಜೆಪಿ ಪಕ್ಷದ ಸದಸ್ಯರು ಮತ್ತೇ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಯಲ್ಲಿ ಕಾರಿನಲ್ಲಿ ಹೊರಟರು. ಈವೇಳೆ ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ರೋಣ ಸಿಪಿಐ ಎಸ್.ಎಸ್ ಬಿಳಗಿ, ಪಿಎಸ್ಐ ಐಶ್ವರ್ಯ ನಾಗಳಾರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ ಕೈಗೊಂಡಿದ್ದಾರೆ.

Exit mobile version