Home News ಕಾಂಗ್ರೆಸ್‌ಗೆ ಸೈನ್ಯದ ಮೇಲೂ ನಂಬಿಕೆಯಿಲ್ಲ

ಕಾಂಗ್ರೆಸ್‌ಗೆ ಸೈನ್ಯದ ಮೇಲೂ ನಂಬಿಕೆಯಿಲ್ಲ

ಹುಬ್ಬಳ್ಳಿ: ಕಾಂಗ್ರೆಸ್‌ಗೆ ಸೈನ್ಯದ ಮೇಲೂ ನಂಬಿಕೆಯಿಲ್ಲ, ಪಾಕಿಸ್ತಾನದ ರೀತಿ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲಾದ ಜೋಶಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಬೆಂಬಲಿಸಿ ನಗರದಲ್ಲಿ ನಡೆದ ಬೃಹತ್ ತಿರಂಗಾ ಯಾತ್ರೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ ನಾಯಕರ ಅಸಂಬದ್ಧ ಹೇಳಿಕೆಗಳು ದೇಶದ ಜನತೆಗೆ ಮಾಡುವ ಅವಮಾನವಾಗಿದೆ. ಭಾರತದವರು ನಮಗೆ ಹೊಡೆದರು ಎಂದು ಪಾಕಿಸ್ತಾನದವರು ಅಮೆರಿಕಾದವರ ಕಾಲಿಗೆ ಬಿದ್ದರು, ಅದರೆ, ಭಾರತದಲ್ಲಿಯೇ ಇದ್ದವರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆಯೇ ಅವಹೇಳನ ಮಾಡುತ್ತಿದ್ದಾರೆ, ಕಾಂಗ್ರೆಸ್ ನಾಯಕರು ಯಾವಾಗಲೂ ಆ ದೇಶದವರಂತೆಯೇ ಮಾಡುತ್ತಾರೆ, ಪಾಕಿಸ್ತಾನದವರು ಭಾರತವನ್ನು ಹಿಂದೂ ಟೆರರ್ ಅಂದರೆ, ಇಲ್ಲಿನ ಕಾಂಗ್ರೆಸ್ ನಾಯಕರು ಸಹ ಅದನ್ನೇ ಹೇಳುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಪಾಕಿಸ್ತಾನವನ್ನು ಏಕಾಂಗಿ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ದೇಶದ ಮುಖಂಡರ ಇಂಥ ಹೇಳಿಕೆಗಳು, ಅವರಿಗೆ ಸಹಾಯವಾಗುತ್ತದೆ ಎಂದರು.

Exit mobile version