Home News ಆಪರೇಷನ್ ಸಿಂದೂರ ಬರೀ ಟ್ರೈಲರ್ ಅಷ್ಟೇ…

ಆಪರೇಷನ್ ಸಿಂದೂರ ಬರೀ ಟ್ರೈಲರ್ ಅಷ್ಟೇ…

ಗುಜರಾತ್: ಅಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ ಇದು ಟ್ರೈಲರ್ ಮಾತ್ರ ಪಿಕ್ಚರ್ ಇನ್ನೂ ಬಾಕಿ ಇದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗುಜರಾತ್‌ನ ಭುಜ್ ವಾಯುನೆಲೆಗೆ ಭೇಟಿ ನೀಡಿ ಮಾತನಾಡಿದ ಅವರು ಯೋಧರು ಅಪರೇಷನ್ ಸಿಂಧೂರ ಯಶಸ್ವಿಗೊಳಿಸಿದ್ದಾರೆ. ಅಪರೇಷನ್ ಸಿಂಧೂರ ಎಂದು ಹೆಸರು ಇಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರು, ಪಾಕಿಸ್ತಾನದ ನಡವಳಿಕೆ ಮೇಲೆ ಮುಂದಿನ ಎಲ್ಲ ಬೆಳವಣಿಗೆಗಳೂ ನಿಂತಿವೆ. ತಮ್ಮ ತಪ್ಪು ತಿದ್ದಿಕೊಂಡು ಮುನ್ನಡೆದರೆ ಸಮಸ್ಯೆಯಿಲ್ಲ. ಪಾಕಿಸ್ತಾನ ಮತ್ತೆ ಹಳೆ ಚಾಳಿಯನ್ನೇ ಪುನರಾವರ್ತಿಸಿದರೆ ಭಾರತ ಕಠಿಣ ಶಿಕ್ಷೆ ನೀಡುವುದು ಗ್ಯಾರಂಟಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ನಮ್ಮ ಸೇನಾಪಡೆ ನಿಖರ ದಾಳಿ ನಡೆಸಿದೆ. ಪರಿಣಾಮ ನೆರೆರಾಷ್ಟ್ರದ ಎಂಟಕ್ಕೂ ಹೆಚ್ಚು ವಾಯುನೆಲೆಗಳು, ನೂರಕ್ಕೂ ಹೆಚ್ಚು ಉಗ್ರರು, ಹಲವಾರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿವೆ. ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಅದು ಮುಗಿಯುವುದೂ ಇಲ್ಲ. ಈಗ ನಾವು ಪಾಕಿಸ್ತಾನಕ್ಕೆ ಟ್ರೈಲರ್ ಮಾತ್ರ ತೋರಿಸಿದ್ದೇವೆ. ಮುಂದಿನ ದಿನಗಳಲ್ಲಿ ಪೂರ್ಣ ಪಿಕ್ಚರ್ ತೋರಿಸುವ ಕೆಲಸವನ್ನು ನಮ್ಮ ಸೇನಾಪಡೆ ಮಾಡಲಿದೆ ಎಂದರು.

Exit mobile version