ಬೆಂಗಳೂರು: ಕರುನಾಡ ಕರಾವಳಿಗೆ ಮನಸೋಲದವರಾರು? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ಕರುನಾಡಿನ ಸಮುದ್ರ ಕಿನಾರೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕರುನಾಡ ಕರಾವಳಿಗೆ ಮನಸೋಲದವರಾರು? ಉಡುಪಿಯ ಮಲ್ಪೆ, ಕಾಪು, ಮರವಂತೆ, ಪಡುಬಿದ್ರಿ, ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಸುರತ್ಕಲ್, ಉತ್ತರ ಕನ್ನಡದ ಮುರುಡೇಶ್ವರ, ಕಾರವಾರ ಹೀಗೆ ಹತ್ತು ಹಲವು ಸಮುದ್ರ ಕಿನಾರೆಗಳು ಲಕ್ಷಾಂತರ ಪ್ರವಾಸಿಗರನ್ನು ಸೆಳೆದಿದೆ. ಈಗ ಮತ್ತೊಮ್ಮೆ ನಮ್ಮ ಪ್ರವಾಸಿ ತಾಣಗಳ ಪ್ರಚಾರ ಮಾಡುವಂತಹ ಸಂದರ್ಭ. ನಮ್ಮ ದೇಶ ಮತ್ತು ನಮ್ಮ ಪ್ರಧಾನಿಗಳ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ ಚೀನಾ ಹಸ್ತಕ ಮಾಲ್ಡೀವ್ಸ್ ದೇಶಕ್ಕೆ ಪಾಠ ಕಲಿಸಬೇಕಾದರೆ ನಮ್ಮಲ್ಲಿರುವ ಪ್ರವಾಸಿ ತಾಣಗಳಿಗೆ ಹೆಚ್ಚು ಭೇಟಿ ನೀಡೋಣ. ಇದೂ ದೇಶಭಕ್ತಿಯ ಒಂದು ಭಾಗವಾಗಿದೆ ಎಂದು ಬರೆದುಕೊಂಡಿದ್ದಾರೆ.