Home News ಕರಾವಳಿ ಬಿಸಿಗಾಳಿ: ಯೆಲ್ಲೋ ಆಲರ್ಟ್

ಕರಾವಳಿ ಬಿಸಿಗಾಳಿ: ಯೆಲ್ಲೋ ಆಲರ್ಟ್

ಮಂಗಳೂರು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ ಹಿನ್ನೆಲೆಯಲ್ಲಿ ಯಲ್ಲೋ ಮುನ್ನಚ್ಚೆರಿಕೆ ನೀಡಿದ್ದು, ತಾಪಮಾನದಲ್ಲಿ ಗಣನೀಯ ಏರಿಕೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಫೆ.೨೬ ಮತ್ತು ೨೭ ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಗರಿಷ್ಠ ತಾಪಮಾನವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ಕರಾವಳಿ ಕರ್ನಾಟಕದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದೆ. ಫೆಬ್ರವರಿ ಸಾಮಾನ್ಯವಾಗಿ ತಂಪಾದ ಹವಾಮಾನ ಹೊಂದಿರುತ್ತದೆ, ಆದರೆ ಈ ಸಲ ಫೆಬ್ರವರಿಯಲ್ಲಿ ತಾಪಮಾನ ಹೆಚ್ಚಿದೆ. ಸದ್ಯದ ವಾತಾವರಣ ಮುಂಜಾನೆ ಮಂಜು, ನಂತರ ಮೋಡ ಕವಿದ ವಾತಾವರಣ, ಮಧ್ಯಾಹ್ನವು ತೀವ್ರವಾದ ಸೂರ್ಯನ ಬೆಳಕಿನಿಂದ ಸುಡುತ್ತದೆ. ಹೀಟ್‌ವೇರ್ ಎಚ್ಚರಿಕೆಯು ಶಾಖದ ತೀವ್ರತೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಎಂಡಿ ಸೂಚಿಸಿದೆ. ಫೆ. ೨೬ರಂದು ಮಂಗಳೂರಿನಲ್ಲಿ ೩೨, ಪಣಂಬೂರಿನಲ್ಲಿ ೩೩ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಯಲ್ಲೋ ಅಲರ್ಟ್..: ಹವಾಮಾನ ಇಲಾಖೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದ್ದು, ಇಂದು ಮತ್ತು ನಾಳೆ ಬಿಸಿ ಮತ್ತು ಆರ್ದ್ರ ವಾತಾವರಣದ ಎಚ್ಚರಿಕೆಯನ್ನು ನೀಡಿದೆ. ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

Exit mobile version