Home ಸುದ್ದಿ ರಾಜ್ಯ ಕನ್ನಡದ ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ವಿಧಿವಶ

ಕನ್ನಡದ ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ವಿಧಿವಶ

0

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಚಿಂತಕ ಪ್ರೋ. ಮಲೆಯೂರು ಗುರುಸ್ವಾಮಿ ಅವರು ಬುಧವಾರ ತಡರಾತ್ರಿ ವಿಧಿವಶರಾದರು.ಹಿರಿಯ ಸಾಹಿತಿ ಗುರುಸ್ವಾಮಿ (75) ಅವರು ಕಳೆದ ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದೊಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿದ್ದರು. ಆದರೆ ಬುಧವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

ಗುರುಸ್ವಾಮಿಯವರು 5ಕ್ಕೂ ಹೆಚ್ಚು ಕಾದಂಬರಿ ರಚನೆ ಮತ್ತು 10ಕ್ಕೂ ಹೆಚ್ಚು ಕೃತಿಗಳನ್ನ ಬರೆದಿದ್ದು, ಇವರು ರಾಜೋತ್ಸವ ಪ್ರಶಸ್ತಿ, ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜಿನರಾಗಿದ್ದರು.

Exit mobile version