Home ಅಪರಾಧ ಕಂಟ್ರಿ ಪಿಸ್ತೂಲ್ ಪೊಲೀಸರ ವಶ

ಕಂಟ್ರಿ ಪಿಸ್ತೂಲ್ ಪೊಲೀಸರ ವಶ

0

ದಾಳಿ ವೇಳೆ 10 ಮಂದಿಯಿಂದ ಒಟ್ಟು 10 ಕಂಟ್ರಿ ಪಿಸ್ತೂಲ್ ಹಾಗೂ 24 ಸಜೀವ ಗುಂಡು ವಶ

ವಿಜಯಪುರ: ಅಕ್ರಮವಾಗಿ ಪಿಸ್ತೂಲ್​ಗಳನ್ನು ಹೊಂದಿದ್ದವರ ಮೇಲೆ ದಾಳಿ ಮಾಡಿದ ಪೊಲೀಸರು ಒಟ್ಟು 10 ಕಂಟ್ರಿ ಪಿಸ್ತೂಲ್​ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್‌ಗಳನ್ನು ಅಕ್ರಮವಾಗಿ ತಂದು ಜಿಲ್ಲೆಯ ಹಲವು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದು ತಿಳಿದುಬಂದಿದ್ದು, ಪಿಸ್ತೂಲ್​ ಹೊಂದಿದ್ದ 10 ಮಂದಿಯನ್ನೂ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ್​ ನಿಂಬರಗಿ ತಿಳಿಸಿದ್ದಾರೆ. ಇತ್ತೀಚೆಗೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೇರಿಯಲ್ಲಿ ನಡೆದಿದ್ದ ಸತೀಶ ಪ್ರೇಮಸಿಂಗ ರಾಠೋಡ ಕೊಲೆ ಪ್ರಕರಣದ ತನಿಖೆಯಲ್ಲಿ ಪಿಸ್ತೂಲ್​ ಪೂರೈಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಯಲಾಗಿತ್ತು. ಕೊಲೆ ಪ್ರಕರಣದ ಪ್ರಮುಖ ಆರೋಪಿ ರಮೇಶ್​ ಗೇಮು ಲಮಾಣಿಗೆ ಇನ್ನೋರ್ವ ಆರೋಪಿ ಸುರೇಶ್​ ರಾಠೋಡ ಎನ್ನುವಾತ ಪಿಸ್ತೂಲ್​ ಪೂರೈಸಿದ್ದನು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಿಜಯಪುರ ಜಿಲ್ಲೆಯ ಹಲವಾರು ಜನರಿಗೆ ಅಕ್ರಮ ಪಿಸ್ತೂಲ್​ ಪೂರೈಸಿರುವುದಾಗಿ ಒಪ್ಪಿಕೊಂಡಿದ್ದ. ಆ ಮಾಹಿತಿಯನ್ನು ಆಧರಿಸಿ ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ಈನಿಂದ ಅಕ್ರಮವಾಗಿ ಪಿಸ್ತೂಲ್​ಗಳನ್ನು ಪಡೆದವರು ಮೇಲೆ ದಾಳಿ ಮಾಡಲಾಯಿತು. ದಾಳಿ ವೇಳೆ 10 ಮಂದಿಯಿಂದ ಒಟ್ಟು 10 ಕಂಟ್ರಿ ಪಿಸ್ತೂಲ್​ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಹೇಳಿದರು.

Exit mobile version