Home ತಾಜಾ ಸುದ್ದಿ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರು ಮೂಲದ ಪೈಲಟ್ ಕ್ಲೈವ್‌ ಕುಂದರ್‌ ಸಾವು

ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರು ಮೂಲದ ಪೈಲಟ್ ಕ್ಲೈವ್‌ ಕುಂದರ್‌ ಸಾವು

0

ಮಂಗಳೂರು: ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಸಹ ಪೈಲಟ್‌ ಮಂಗಳೂರು ಮೂಲದವರು ಎಂದು ಹೇಳಲಾಗಿದೆ.
ಈ ವಿಮಾನದಲ್ಲಿದ್ದ 242 ಮಂದಿ ಪೈಕಿ ವಿಮಾನದ ಫಸ್ಟ್‌ ಆಫೀಸರ್‌ ಆಗಿರುವ ಕ್ಯಾಪ್ಟನ್ ಕ್ಲೈವ್‌ ಕುಂದರ್‌ ಮಂಗಳೂರು ಮೂಲದವರಾದರೂ ಕ್ಯಾ. ಕ್ಲೈವ್ ಕುಂದರ್‌ ಕುಟುಂಬ ಮುಂಬೈನಲ್ಲಿ ನೆಲೆಸಿದೆ. ಇವರು ಕೆಥೋಲಿಕ್‌ ಸಮುದಾಯದ ಪ್ರೊಟೆಸ್ಟೆಂಟ್‌ ಪಂಗಡಕ್ಕೆ ಸೇರಿದ್ದು, ಇವರ ತಾಯಿ ರೇಖಾ ಕುಂದರ್‌ ಅವರು ಏರ್‌ಹೋಸ್ಟ್‌ ಆಗಿ ನಿವೃತ್ತಿ ಹೊಂದಿದ್ದರು.
ಇವರಿದ್ದ ಬೋಯಿಂಗ್‌ 787 ಡ್ರೀಮ್‌ಲೈನ್‌ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.38ಕ್ಕೆ ಲಂಡನ್‌ಗೆ ಹೊರಟಿತ್ತು. ಕ್ಯಾ.ಕ್ಲೈವ್‌ ಕುಂದರ್‌ 1,100 ಗಂಟೆಗಳ ಹಾರಾಟ ಅನುಭವ ಹೊಂದಿದ ಸಹ ಪೈಲಟ್‌ ಆಗಿದ್ದಾರೆ. 8,200 ಗಂಟೆಗೂ ಹೆಚ್ಚು ಹಾರಾಟ ತರಬೇತಿ ಹೊಂದಿದ್ದ ಕ್ಯಾ. ಸುಮೀತ್‌ ಸರ್ಭಲ್‌ವಾಲ್‌ ಪೈಲಟ್‌ ಆಗಿದ್ದರು.

Exit mobile version