Home ತಾಜಾ ಸುದ್ದಿ ಏಕವಚನದಲ್ಲಿಯೇ ಸಿ.ಟಿ.ರವಿ ವಿರುದ್ಧ ಕೆಂಡಕಾರಿದ ಹೆಬ್ಬಾಳ್ಕರ್

ಏಕವಚನದಲ್ಲಿಯೇ ಸಿ.ಟಿ.ರವಿ ವಿರುದ್ಧ ಕೆಂಡಕಾರಿದ ಹೆಬ್ಬಾಳ್ಕರ್

0

ಬೆಳಗಾವಿ: ಏಯ್‌ ನಿನಗೆ ಹೆಂಡ್ತಿ ಇಲ್ವೆನೋ, ತಾಯಿ ಇಲ್ವೆನೋ, ನಿನಗೆ ಮಗಳು ಇಲ್ವೆನೋ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ವಿರುದ್ಧ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌ ಕೆಂಡಕಾರಿದ್ದಾರೆ.
ಪರಿಷತ್‌ನಲ್ಲಿ ತರಾಟೆಗೆ ತೆಗೆದುಕೊಂಡ ಹೆಬ್ಬಾಳ್ಕರ್‌, ಸಿ.ಟಿ ರವಿ ಅವರಿಗೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ನಿನಗೆ ನಾಚಿಕೆಯಾಗುವುದಿಲ್ಲವೇನೋ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಗದ್ದಲ ಉಂಟಾಗಿ ಸಭಾಪತಿ ಬಸವರಾಜ ಹೊರಟ್ಟಿ ಅನಿರ್ಧಿಷ್ಟಾವಧಿಗೆ ಮುಂದೂಡಿದರು.

Exit mobile version