Home ನಮ್ಮ ಜಿಲ್ಲೆ ಉಡುಪಿ ಉಡುಪಿಗೂ ಬಂದಿದ್ದ ಫಡ್ನವಿಸ್

ಉಡುಪಿಗೂ ಬಂದಿದ್ದ ಫಡ್ನವಿಸ್

0

ಉಡುಪಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್, ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭ‌ ಶ್ರೀಕೃಷ್ಣ ಭಕ್ತನಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.
ಕಳೆದ ಮಾರ್ಚ್ 12ರಂದು ಉಡುಪಿಗೆ ಆಗಮಿಸಿ, ಶ್ರೀಕೃಷ್ಣ ಮುಖ್ಯಪ್ರಾಣ ದರ್ಶನ ಪಡೆದ ಅವರು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಶ್ರೀಗಳು ಸಾಗರದಾಚೆಗೂ ನಡೆಸುತ್ತಿರುವ ಶ್ರೀಕೃಷ್ಣ ತತ್ವ ಪ್ರಚಾರ ಹಾಗೂ ತಮ್ಮ ಚತುರ್ಥ ಪರ್ಯಾಯ ಅವಧಿಯಲ್ಲಿ ನಡೆಸುತ್ತಿರುವ ಭಗವದ್ಗೀತಾ ಕೋಟಿ ಗೀತಾ ಲೇಖನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಪಡೆದಿದ್ದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಜೊತೆಗಿದ್ದರು.

Exit mobile version