ಬೆಂಗಳೂರು: ಅನ್ನಭಾಗ್ಯ ಸ್ಕೀಮಿನದು ಕೇವಲ ಎರಡು ತಿಂಗಳು ಹಣ ಮಾತ್ರ ಬಾಕಿಯಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳಿನಿಂದ ಅನ್ನಭಾಗ್ಯದ ಹಣ ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅನ್ನಭಾಗ್ಯ ಸ್ಕೀಮಿನದು ಕೇವಲ ಎರಡು ತಿಂಗಳು ಹಣ ಮಾತ್ರ ಬಾಕಿಯಿದೆ. ಮುಂಚೆ ಎರಡು ತಿಂಗಳಿಗೊಮ್ಮೆ ಹಣ ಹಾಕಲಾಗುತಿತ್ತು, ಇನ್ನು ಮುಂದೆ ಪ್ರತಿ ತಿಂಗಳು ಹಣ ಹಾಕುತ್ತೇವೆ ಎಂದರು.