Home ನಮ್ಮ ಜಿಲ್ಲೆ ಧಾರವಾಡ ಇದು ಕಂಪ್ಲೆಂಟ್ ಸರ್ಕಾರ

ಇದು ಕಂಪ್ಲೆಂಟ್ ಸರ್ಕಾರ

0

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಸಿಸಿ ಸರ್ಕಾರ ಇದ್ದಂತೆ. ಇದು ಕಂಪ್ಲೇಟ್ ಮತ್ತು ಭ್ರಷ್ಟಾಚಾರದ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು‌.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಸ್ಪರ ಕೆಸರೆರಚಾಟ ನೋಡಿದರೆ ಇದು ಕಂಪ್ಲೆಂಟ್ ಸರ್ಕಾರ. ರಾಜ್ಯ ಸರ್ಕಾರ ರಾಜ್ಯದಲ್ಲಿ ಕಂಟ್ರೋಲ್ ಕಳೆದುಕೊಳ್ಳುತ್ತಿದೆ ಎಂದರು.
ರಾಜ್ಯ ಸರ್ಕಾರದ ವಿರುದ್ಧ ವಿಪ ಸದಸ್ಯ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವಿಚಾರ, ಹರಿಪ್ರಸಾದ್ ಅವರು ಸಿದ್ಧರಾಮಯ್ಯ ಚಡ್ಡಿ ವಿಚಾರವಾಗಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಬೇಕು. ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಆದರೆ ಪರಸ್ಪರ ಕೆಸರೆರಚಾಟ ನಿಲ್ಲುತ್ತಿಲ್ಲ. ಗುಂಪುಗಾರಿಕೆಯಿಂದ ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದೆ. ಸಿಸಿ ರಸ್ತೆಯಂತೆ ಇದು ಕಂಪ್ಲೆಂಟ್ ಹಾಗೂ ಕರಪ್ಷನ್‌ ಸರ್ಕಾರ. ಇದೇ ಸರ್ಕಾರದ ಸಾಧನೆ ಎಂದರು.
ಈಡಿಗ ಸಮಾವೇಶದ ಕುರಿತು ಬಿಜೆಪಿ‌ ಹರಿಪ್ರಸಾದ ಮಾತನಾಡಿದ್ದಾರೆ.ಕಾಂಗ್ರೆಸ್ ನಲ್ಲಿ ಬಿ.ಕೆ‌ಹರಿಪ್ರಸಾದ್ ಅವರ ವಿರುದ್ಧ ಮಸಲತ್ತು ಮಾಡುವವರ ವಿರುದ್ಧ ಮಾತನಾಡುವ ತಾಕತ್ತು ಬಿ.ಕೆ.ಹರಿಪ್ರಸಾದ್ ಅವರಿಗಿಲ್ಲ. ಹೀಗಾಗಿ ಅವರು ಬಿಜೆಪಿಗೆ ಬೈಯ್ಯುತ್ತಿದ್ದಾರೆ
ಈ ಮಸಲತ್ತು ಮಾಡುತ್ತಿರೋರು ಸಿದ್ಧರಾಮಯ್ಯ ಅವರೇ. ಆದರೆ ಅದರ ವಿರುದ್ಧ ಮಾತನಾಡುವ ಶಕ್ತಿ ಹರಿಪ್ರಸಾದ ಅವರಿಗೆ ಇಲ್ಲ. ಅವರು ಸರ್ಕಾರದ ವಿರುದ್ಧ ಎಷ್ಟು ಪುಟಿಯುತ್ತಾರೋ‌ ಅದರ ಮೇಲೆ ಉತ್ತರ ನೀಡುತ್ತೇನೆ ಎಂದು ಜೋಶಿ ಹೇಳಿದರು.

Exit mobile version