Home ಅಪರಾಧ ತಲೆಮರೆಸಿಕೊಂಡಿದ್ದ ಆರೋಪಿ ಕಿಲ್ಲೇದಾರ ಕೋರ್ಟ್‌ಗೆ ಹಾಜರು

ತಲೆಮರೆಸಿಕೊಂಡಿದ್ದ ಆರೋಪಿ ಕಿಲ್ಲೇದಾರ ಕೋರ್ಟ್‌ಗೆ ಹಾಜರು

0

ಹುಬ್ಬಳ್ಳಿ: ಹಿಂದುಗಳ ಭಾವನೆಗೆ ಧಕ್ಕೆ ಆರೋಪದಡಿ ತಲೆಮರೆಸಿಕೊಂಡಿದ್ದ ಆರೋಪಿ ಬೈತುಲ್ಲಾ ಕಿಲ್ಲೇದಾರ ನಗರದ ಮೂರನೇ ಜೆಎಂಎಫ್‌ಸಿ ಕೋರ್ಟ್‌ಗೆ ಗುರುವಾರ ಹಾಜರಾಗಿದ್ದಾಳೆ. ಪ್ರಕರಣದ ಪರಾಮರ್ಶೆ ನಡೆಸಿದ ಕೋರ್ಟ್, ಏ. ೨ರವರೆಗೆ(೧೪ ದಿನ) ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ನ್ಯಾಯಾಲಯ, ಬೈತುಲ್ಲಾ ಕಿಲ್ಲೇದಾರ ಅವರನ್ನು ಧಾರವಾಡದ ಜಿಲ್ಲಾ ಕಾರಾಗೃಹಕ್ಕೆ ಹಾಜರುಪಡಿಸಲು ಆದೇಶಿಸಿದೆ.
ಬೇರೆ ಸಮುದಾಯದ ವ್ಯಕ್ತಿ ಜತೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ ಹಿಂದುಗಳ ಭಾವನೆಗೆ ಧಕ್ಕೆ ಬರುವ ಹಾಗೆ ಮಾತನಾಡಿದ್ದಾರೆ ಎಂದು ಆರೋಪಿಸಿ, ಕಾರ್ಯಕರ್ತೆ ವಿರುದ್ಧ ವ್ಯಕ್ತಿಯೊಬ್ಬರು ಕಸಬಾಪೇಟೆ ಠಾಣೆಗೆ ದೂರು ನೀಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆಕೆಯನ್ನು ಬಂಧಿಸಲು ಬಲೆ ಬೀಸಿದ್ದರು. ಆದರೆ, ಅಂಗನವಾಡಿ ಕಾರ್ಯಕರ್ತೆ ನೇರವಾಗಿ ಕೋರ್ಟ್‌ಗೆ ಹಾಜರಾಗಿದ್ದಾಳೆ. ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣ, ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣಗಳು ಕೂಡ ಈಕೆಯ ಮೇಲಿವೆ.

Exit mobile version