Home ಅಪರಾಧ ಆಯ ತಪ್ಪಿ ಬಾವಿಗೆ ಬಿದ್ದ ಮೀನುಗಾರ ಸಾವು

ಆಯ ತಪ್ಪಿ ಬಾವಿಗೆ ಬಿದ್ದ ಮೀನುಗಾರ ಸಾವು

0


ಉಳ್ಳಾಲ:ಮೀನುಗಾರನೋರ್ವ
ಸಮುದ್ರ ತೀರದ ಪಾಲು ಬಿದ್ದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೋಮೇಶ್ವರ ಉಚ್ಚಿಲದ ರೆಸಾರ್ಟ್ ನ ಮುಂಭಾಗದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಉಚ್ಚಿಲ ವಾಝ್ಕೊ ರೆಸಾರ್ಟ್ ಬಳಿಯ ನಿವಾಸಿ ಶಶೀಂದ್ರ.ಎಮ್ ಉಚ್ಚಿಲ್ (75) ಎಂದು ಗುರುತಿಸಲಾಗಿದೆ
ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ಅವರು ಸ್ನೇಹಿತನ ಜೊತೆ ರೆಸಾರ್ಟ್ ಮುಂಭಾಗದ ಪಾಲು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ.ಈ ವೇಳೆ ಶಶೀಂದ್ರ ಅವರು ಆಯ ತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ . ಬಾವಿಯಲ್ಲಿ ಕೇವಲ ಮೂರಡಿಯಷ್ಟು ನೀರಿದ್ದ ಪರಿಣಾಮ ಶಶೀಂದ್ರ ಅವರ ತಲೆಗೆ ಗಂಭೀರ ಏಟು ತಗುಲಿ ಸಾವನ್ನಪ್ಪಿದ್ದಾರೆ.ಸ್ಥಳೀಯರು ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾಣಿಸಿದ್ದಾರೆ.

Exit mobile version