Home News ಆಯತಪ್ಪಿ ರೈಲಿಗೆ ಬೀಳುತ್ತಿದವನ ರಕ್ಷಣೆ

ಆಯತಪ್ಪಿ ರೈಲಿಗೆ ಬೀಳುತ್ತಿದವನ ರಕ್ಷಣೆ

ದಾವಣಗೆರೆ: ಆಯತಪ್ಪಿ ರೈಲಿಗೆ ಬೀಳುತ್ತಿದ್ದ ಪ್ರ‍್ರಯಾಣಿಕರೊಬ್ಬರನ್ನ ಅಲ್ಲಿನ ಗೃಹ ರಕ್ಷಕದಳದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ರಾಧಾಕೃಷ್ಣ ಅವರು ಬೆಳಿಗ್ಗೆ ೧೧:೨೦ಕ್ಕೆ ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಬಿಸ್ಕೇಟ್ ಖರೀದಿ ಮಾಡಲು ಕೆಳಗಿಳಿದಿದ್ದರು. ಈ ವೇಳೆ ರೈಲು ಚಲಿಸಲು ಪ್ರಾರಂಭಿಸಿದಾಗ ಗಾಬರಿಯಿಂದ ರೈಲು ಹತ್ತಲು ಮುಂದಾದ ವೇಳೆ ಆಯತಪ್ಪಿ ಬಿದ್ದಿದ್ದು, ತಕ್ಷಣವೇ ಅಲ್ಲಿದ್ದ ಗೃಹರಕ್ಷಕದಳದ ಸಿಬ್ಬಂದಿ ಲಕ್ಷ್ಮಣ್ ನಾಯ್ಕ್ ಅವರು ರಕ್ಷಣೆ ಮಾಡಿ ಪ್ರಾಣ ಉಳಿಸಿ, ರಾಧಕೃಷ್ಣ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಲಕ್ಷ್ಮಣ್ ನಾಯ್ಕ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Exit mobile version