Home ಅಪರಾಧ ಅಪ್ರಾಪ್ತ ಮಗಳನ್ನೇ ಗರ್ಭಿಣಿಯಾಗಿಸಿದ ತಂದೆ: ಪೋಕ್ಸೊ ಪ್ರಕರಣ ದಾಖಲು

ಅಪ್ರಾಪ್ತ ಮಗಳನ್ನೇ ಗರ್ಭಿಣಿಯಾಗಿಸಿದ ತಂದೆ: ಪೋಕ್ಸೊ ಪ್ರಕರಣ ದಾಖಲು

0

ಮೂಡುಬಿದಿರೆ: ಕಾಮುಕ ತಂದೆಯೋರ್ವ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನು ಮೂಡುಬಿದಿರೆ ಪೊಲೀಸರು ಪೋಕ್ಸೊ ಪ್ರಕರಣದಲ್ಲಿ ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಳಿಯೂರಿನ ಉಮೇಶ್ ಶೆಟ್ಟಿ(55) ಎಂದು ತಿಳಿದುಬಂದಿದೆ. ಈತ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಆರು ತಿಂಗಳ ಹಿಂದೆ ಮನೆಯಲ್ಲೇ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಮಗಳು ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ಮಗಳ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಗಳು ಆರು ತಿಂಗಳ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ. ಪೊಲೀಸ್ ತನಿಖೆಯ ದಾರಿ ತಪ್ಪಿಸಲು ಪ್ರಾರಂಭದಲ್ಲಿ ಉಮೇಶ್ ಬೇರೆಯವರ ಹೆಸರು ಹೇಳಿದ್ದ ಎನ್ನಲಾಗಿದೆ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆನ್ನಲಾಗಿದೆ. ಮಂಗಳೂರು ಮಹಿಳಾ ಪೊಲೀಸ್‍ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಗುರುವಾರ ಮೂಡುಬಿದಿರೆ ಪೊಲೀಸ್ ಇನ್‍ಸ್ಪೆಕ್ಟರ್ ಸಂದೇಶ್ ಕುಮಾರ್ ಬಂಧಿಸಿದ್ದಾರೆ.

Exit mobile version