ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅನುಪಯುಕ್ತ ಬಸ್ಸನ್ನು ಭೋಜನಾ ಬಂಡಿಯನ್ನಾಗಿ (ಮೊಬೈಲ್ ಕ್ಯಾಂಟೀನ್) ಪರಿವರ್ತಿಸಿರುವ ವಿಷಯವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಪೋಸ್ಟ್ ಮಾಡಿದ್ದು ಕೇಂದ್ರೀಯ ಕಾರ್ಯಗಾರ 4 ರ ತಾಂತ್ರಿಕ ಸಿಬ್ಬಂದಿಗಳ ಕಠಿಣ ಪರಿಶ್ರಮ ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಕೇಂದ್ರೀಯ ಕಾರ್ಯಗಾರ-4ರ ತಾಂತ್ರಿಕ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ. ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್.ಆರ್, ನಿರ್ದೇಶಕ ಶಿಲ್ಪಾ.ಎಂ ಮತ್ತು ಮುಖ್ಯ ತಾಂತ್ರಿಕ ಅಭಿಯಂತ ಎ.ಎನ್.ಗಜೇಂದ್ರ ಕುಮಾರ್ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದಿದ್ದಾರೆ.