Home ತಾಜಾ ಸುದ್ದಿ ಅಂಜುವ ಕುಲವಲ್ಲ, ಆಂಜನೇಯನ ಕುಲ…

ಅಂಜುವ ಕುಲವಲ್ಲ, ಆಂಜನೇಯನ ಕುಲ…

0

ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದ ಮೇರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಿದ್ದರಾಮಯ್ಯನವರ ಸರ್ಕಾರ ನನ್ನ ಮೇಲೆ ಪ್ರಕರಣ ಧಾಖಲಿಸಿ ನನ್ನನು ಭಯಪಡಿಸಬಹುದು ಎಂದು ಅಂದುಕೊಂಡರೆ ಅವರ ಮೂರ್ಖತನ. ಈವರೆಗೂ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಧಾಖಲಿಸಿದ ಬಹುತೇಕ ಪ್ರಕರಣಗಳಲ್ಲಿ ಸರ್ಕಾರ ಸೋಲು ಒಪ್ಪಿಕೊಂಡು ಹೈಕೋರ್ಟ್ ಆದೇಶಕ್ಕೆ ಮಂಡಿಯೂರಿದೆ ಎಂದಿದ್ದಾರೆ.

Exit mobile version