Home ಅಪರಾಧ ಅಂಜಲಿ ಹತ್ಯೆ: ಬೆಂಡಿಗೇರಿ ಠಾಣೆ ಪಿಐ, ಎಚ್‌ಸಿ ಅಮಾನತು

ಅಂಜಲಿ ಹತ್ಯೆ: ಬೆಂಡಿಗೇರಿ ಠಾಣೆ ಪಿಐ, ಎಚ್‌ಸಿ ಅಮಾನತು

0

ಹುಬ್ಬಳ್ಳಿ: ತನಗೆ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ಕುಟುಂಬದವರೊಂದಿಗೆ ಠಾಣೆಗೆ ದೂರು ಕೊಡಲು ಬಂದಾಗ ದೂರು ದಾಖಲಿಸದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್(ಪಿಐ) ಸಿ.ಬಿ ಚಿಕ್ಕೋಡಿ ಹಾಗೂ ಹೆಡ್ ಕಾನ್‌ಸ್ಟೇಬಲ್ ರೇಖಾ ಹಾವರಡ್ಡಿ ಅವರನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಆದೇಶಿಸಿದ್ದಾರೆ.
ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಆರೋಪಿ ವಿಶ್ವನಾಥ್ ಅಲಿಯಾಸ್ ಗಿರೀಶ್ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ನಾವು ದೂರು ಕೊಡಲು ಹೋದಾಗ ಪೊಲೀಸರು ದೂರು ಪಡೆಯದೇ ನಿರ್ಲಕ್ಷ್ಯ ತೋರಿದ್ದರು ಎಂದು ಹತ್ಯೆಗೀಡಾದ ಅಂಜಲಿ ಸಹೋದರಿಯರು, ಓಣಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರೇ ಕಾರಣ ಎಂದು ದೂರಿದ್ದರು.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಿದ್ದಾರೆ.

Exit mobile version