Home ತಾಜಾ ಸುದ್ದಿ ʼಎಮರ್ಜೆನ್ಸಿʼ ಸುದ್ದಿ ಹಂಚಿಕೊಂಡ ಕಂಗನಾ

ʼಎಮರ್ಜೆನ್ಸಿʼ ಸುದ್ದಿ ಹಂಚಿಕೊಂಡ ಕಂಗನಾ

0

ನವದೆಹಲಿ: ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಎಮರ್ಜೆನ್ಸಿ ಸುದ್ದಿ ಹಂಚಿಕೊಂಡಿದ್ದಾರೆ,
ಅವರ ನಟನೆಯ ಬಹುನಿರೀಕ್ಷಿತ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯು ಪ್ರಮಾಣಪತ್ರ ನೀಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ, ನಮ್ಮ ಚಿತ್ರ ಎಮರ್ಜೆನ್ಸಿಗೆ ಸೆನ್ಸಾರ್ ಪ್ರಮಾಣಪತ್ರವನ್ನು ಸ್ವೀಕರಿಸಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ, ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

Exit mobile version