Home ತಾಜಾ ಸುದ್ದಿ ಹೆಬ್ಬಾಳಕರ ವಿರುದ್ಧ ಸಂಜಯ ಪಾಟೀಲ ಹಗುರ ಮಾತು

ಹೆಬ್ಬಾಳಕರ ವಿರುದ್ಧ ಸಂಜಯ ಪಾಟೀಲ ಹಗುರ ಮಾತು

0

ಬೆಳಗಾವಿ: ಮಾತಿನ ಭರದಲ್ಲಿ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಶನಿವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಂಜಯ ಪಾಟೀಲ್, ಸಮಾವೇಶದಲ್ಲಿ ಇಷ್ಟೊಂದು
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿನ ಮಹಿಳೆಯರಿರುವುದು ನೋಡಿದರೆ ಅವರಿಗೆ ನಿದ್ದೆ ಬರುವುದಿಲ್ಲ. ಇನ್ನು ಕಾರ್ಯಕ್ರಮಕ್ಕೆ ರಮೇಶ ಜಾರಕಿಹೊಳಿ ಬಂದಿರುವುದು ನೋಡಿದರೆ ಕಷ್ಟವಾಗುತ್ತದೆ ಎಂದು ಹೇಳುತ್ತಾ ಮುಂದುವರೆದು ಇವತ್ತು ಲಕ್ಷ್ಮೀ ಹೆಬ್ಬಾಳಕರ ಅವರು ನಿದ್ದೆ ಮಾತ್ರೆ ತೆಗೆದುಕೊಂಡು ಮಲಗಬೇಕು. ಇಲ್ಲದಿದ್ದರೆ ಒಂದು ಎಕ್ಸಟ್ರಾ ಪೆಗ್ ಹೊಡೆಯಬೇಕು ಎಂದಿದ್ದಾರೆ. ರಾಜ್ಯದ ಸಚಿವೆಯೊಬ್ಬರ ಬಗ್ಗೆ ಮಾಜಿ ಶಾಸಕರು ಹಗುರವಾಗಿ ಮಾತನಾಡಿರುವುದು ಸದ್ಯ ಭಾರೀ ಟೀಕೆಗೆ ಗುರಿಯಾಗಿದೆ.

Exit mobile version