Home ತಾಜಾ ಸುದ್ದಿ ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ

ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ

0

: ಶ್ರೀರಾಮೇಶ್ವರ ಶಿವಲಿಂಗದ ದಿವ್ಯದರ್ಶನ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯಲ್ಲಿ ಶ್ರೀರಾಮೇಶ್ವರ ಶಿವಲಿಂಗದ ದಿವ್ಯದರ್ಶನ ಏರ್ಪಡಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕ್ಷಮತಾ ಸೇವಾ ಸಂಸ್ಥೆ ಇದೇ ಮಾರ್ಚ್ 8 ರಂದು ಶಿವರಾತ್ರಿಯ ದಿನ ಆಯೋಜಿಸುತ್ತಿದೆ ಸಂಗೀತದೊಂದಿಗೆ ಶಿವನಾಮ ಸ್ಮರಣೆ ಮಹಾಶಿವರಾತ್ರಿ ಸಂಭ್ರಮಾಚರಣೆ. ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯಲ್ಲಿ ಶ್ರೀರಾಮೇಶ್ವರ ಶಿವಲಿಂಗದ ದಿವ್ಯದರ್ಶನ ಏರ್ಪಡಿಸಲಾಗಿದೆ. ಶ್ರೀ ಪರಮಪೂಜ್ಯ ಪಂಡಿತ ರುದ್ರಮುನಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಮಹಾಶಿವನ ಪೂಜಾ ಕಾರ್ಯಗಳು ಜರುಗಲಿವೆ ಹಾಗೂ ಪಂಚಮುಖಿ ರುದ್ರಾಕ್ಷಿ ವಿತರಣೆ ಕೂಡ ಹಮ್ಮಿಕೊಳ್ಳಲಾಗಿದೆ. ಸರ್ವರಿಗೂ ಉಚಿತ ಸ್ವಾಗತವಿದ್ದು ತಾವೆಲ್ಲರೂ ಆಗಮಿಸಿ ಈ ದಿವ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇನೆ ಎಂದಿದ್ದಾರೆ.

ಸ್ಥಳ: ಜಿಮಖಾನ ಮೈದಾನ, ದೇಶಪಾಂಡೆ ನಗರ, ಹುಬ್ಬಳ್ಳಿ.
ಸಮಯ: ಬೆಳಗ್ಗೆ 9:00 ರಿಂದ

Exit mobile version