Home ಅಪರಾಧ ಹಾಸನ: ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

ಹಾಸನ: ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

0

ಹಾಸನ: ನಿಂತಿದ್ದ ಟ್ರ್ಯಾಕ್ಟರ್ ಒಂದಕ್ಕೆ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಇಬ್ಬರು ಮಕ್ಕಳು ಸೇರಿದತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ತಿಪಟೂರು ಮುಖ್ಯ ರಸ್ತೆಯ ನವಿಲೇ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು ತಿಪಟೂರು ತಾಲೂಕಿನ ಎಡಗರಹಳ್ಳಿ ಗ್ರಾಮದ ಯೋಗೇಶ್ ಆಚಾರಿ(35) ಅವರ ಪತ್ನಿ ಲಕ್ಷ್ಮಿ(27) ಹಾಗೂ ಯೋಗೇಶ್ ಆಚಾರಿ ತಂಗಿಯ ಮಕ್ಕಳಾದ ಗಾನವಿ(12) ತೇಜು(4) ಎಂದು ಗುರುತಿಸಲಾಗಿದೆ.
ಮೃತ ದಂಪತಿ ಅನೇಕ ವರ್ಷಗಳಿಂದ ನವಿಲೇ ಗೇಟ್‌ನಲ್ಲಿ ವಾಸವಾಗಿದ್ದರು. ಶನಿವಾರ ತಮ್ಮ ಹುಟ್ಟೂರಿನಿಂದ ನವಲೆ ಗೇಟ್‌ಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಡೀಸೆಲ್ ಖಾಲಿಯಾದ ಹಿನ್ನೆಲೆಯಲ್ಲಿ ಟ್ಯಾಕ್ಟರ್ ಅನ್ನು ಚಾಲಕ ನಡು ರಸ್ತೆಯ ಮೇಲೆ ಬಿಟ್ಟು ಹೋಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version