Home ತಾಜಾ ಸುದ್ದಿ ಹಾಡುಹಗಲೇ ಸರಗಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಹಾಡುಹಗಲೇ ಸರಗಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

0

ಕೆ.ಆರ್.ಪೇಟೆ: ಹಾಡುಹಗಲೇ ಸರಗಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರೆ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.ತಾಲೂಕಿನ ಕೃಷ್ಣಾಪುರ ಗ್ರಾಮದ ಶ್ರೀನಿವಾಸ ಎಂಬ ವ್ಯಕ್ತಿಯೆ ಸಾರ್ವಜನಿಕರಿಂದ ಗೂಸಾ ತಿಂದು ಪೋಲೀರ ಅಥಿತಿಯಾಗಿದ್ದಾನೆ.
ಘಟನೆ ವಿವರ:-ಪಟ್ಟಣದ ಹೇಮಗಿರಿ ರಸ್ತೆಯಲ್ಲಿ ವಾಸವಿರುವ (ಬಿ.ಎಲ್.ಡಿ.ಪೆಟ್ರೋಲ್ ಬಂಕ್ ಬಳಿ) ನಿವೃತ್ತ ಎ.ಎಸ್.ಐ ಶೀಳನೆರೆ ಸೋಮಶೇಖರ್ ಎಂಬುವವರು ತಮ್ಮ ವಾಣಿಜ್ಯ ಮಳಿಗೆಯಲ್ಲಿ ನಡೆಸುತ್ತಿರುವ ಪ್ರಾವಿಷನ್ ಸ್ಟೋರ್ ಗೆ ಟಿವಿಎಸ್ ಸ್ಕೂಟರ್ ನಲ್ಲಿ ಬಂದ ಸರಗಳ್ಳ ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದು ಯಾರೂ ಇಲ್ಲದ ಸಮಯ ನೋಡಿ ಏಕಾಏಕಿ ಅಂಗಡಿಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಕೀಳಲು ಯತ್ನಿಸಿದ್ದಾನೆ ಕೂಡಲೆ ಎಚ್ಚೆತ್ತ ಮಹಿಳೆ ಅಲ್ಲೇ ಇದ್ದ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದಾಗ ಅಲ್ಲಿಂದ ಕಾಲ್ಕಿತ್ತಿದ್ದಾನೆ ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

Exit mobile version