Home ನಮ್ಮ ಜಿಲ್ಲೆ ಕೋಲಾರ ಹನಿಟ್ರ‍್ಯಾಪ್ ತನಿಖೆ: ಸಿಎಂ, ಗೃಹಮಂತ್ರಿಗಳಿಗೆ ಬಿಟ್ಟ ವಿಚಾರ

ಹನಿಟ್ರ‍್ಯಾಪ್ ತನಿಖೆ: ಸಿಎಂ, ಗೃಹಮಂತ್ರಿಗಳಿಗೆ ಬಿಟ್ಟ ವಿಚಾರ

0

ಕೋಲಾರ: ಹನಿಟ್ರ‍್ಯಾಪ್ ಆರೋಪ ಮುಂದೆಯೂ ಬರಬಹುದು ಎಂದು ಹೇಳುವ ಮೂಲಕ ಕೋಲಾರದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ‍್ಯಾಪ್ ಕುರಿತು ವಿಧಾನಸಭೆಯಲ್ಲಿ ಹೇಳುವಷ್ಟು ಹೇಳಿದ್ದೇನೆ. ಅದನ್ನು ಹೊರತು ಪಡಿಸಿ ಹೇಳುವಷ್ಟು ಏನು ಇಲ್ಲ. ಹನಿಟ್ರ‍್ಯಾಪ್ ತನಿಖೆ ಸಿಎಂ ಹಾಗೂ ಗೃಹಮಂತ್ರಿಗಳಿಗೆ ಬಿಟ್ಟ ವಿಚಾರ, ವಿಧಾನಸಭೆಯಲ್ಲಿ ಶಾಸಕರ ಅಮಾನತು ವಿಷಯದಲ್ಲಿ ನಾನಾಗಿದಿದ್ದರೆ ಇನ್ನೂ ಮುಂಚಿತವಾಗಿ ಈ ಕೆಲಸ ಮಾಡುತ್ತಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕಪ್ಪು ಚುಕ್ಕೆ, ಜನಪರ ವಿಚಾರವನ್ನಿಟ್ಟುಕೊಂಡು ಶಾಸಕರು ಚರ್ಚೆ ಮಾಡುತ್ತಿಲ್ಲ. ಬಜೆಟ್ ಬಗ್ಗೆ 80 ಶಾಸಕರು ಪ್ರಸ್ತಾಪ ಮಾಡಿದ್ದಾರೆ, ಅದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ. ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ಅಡಚಣೆ ಮಾಡಲು ಈ ರೀತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಕಪ್ಪುಚುಕ್ಕೆ. ನಾನು ಸ್ಪೀಕರ್ ಆಗಿದ್ದರೆ ಮೊದಲೇ ಸಸ್ಪೆಂಡ್ ಮಾಡುತ್ತಿದ್ದೆ, ಕರ್ನಾಟಕ ಬಂದ್ ವಿಚಾರ ಸಂಬಂದ ಮಾತನಾಡಿದ ಅವರು, ಬೆಂಗಳೂರು ಬಂದ್ ಮಾಡಿದ್ರೆ ಬೆಳಗಾವಿ ಕನ್ನಡಿಗರಿಗೆ ರಕ್ಷಣೆ ಸಿಗುತ್ತಾ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿ ಎಂದರು.

Exit mobile version