Home ಅಪರಾಧ ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು

ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು

0

ಹಟ್ಟಿ(ರಾಯಚೂರು ಜಿಲ್ಲೆ): ಹಟ್ಟಿ ಚಿನ್ನದ ಕಂಪನಿಯಲ್ಲಿ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ  ಹಾಗೂ ನಾಲ್ಕು ಕಾರ್ಮಿರಿಗೆ ಗಂಭೀರ ಗಾಯಗಳಾಗಿರು ಘಟನೆ ಶುಕ್ರವಾರ ಬೆಳಗಿನ  ಜಾವ  ನಡೆದಿದೆ.
ವಾವನ್ನಪ್ಪಿದ ಕಾರ್ಮಿಕ ಮೌನೇಶ ಎಂದು ಗುರುತಿಸಲಾಗಿದೆ‌.
ಹಟ್ಟಿ ಚಿನ್ನದ ಗಣಿಯಲ್ಲಿ ರಾತ್ರಿ ಪಾಳೆ ಕೆಲಸವನ್ನು ಕಾರ್ಮಿಕರು ಮಾಡುತ್ತಿರುವಾಗ ಮಣ್ಣು ಕುಸಿದು ನಾಲ್ಕು ಜನಕ್ಕೆ ಗಂಭೀರ ಗಾಯಗೊಂಡಿದ್ದಾರೆ. ಗಾಯಗಗೊಂಡ  ನಾಲ್ವರು ಕಾರ್ಮಿಕರನ್ನು  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಮೃತ ಕಾರ್ಮಿಕನ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ ಮಾಡುವವರೆಗೆ ಮರಣೀತ್ತರ ಪರೀಕ್ಣೆಗೆ ಅವಕಾಶ ನೀಡುವುದಿಲ್ಲ ಎಂದು ಗಣಿಯ ಎಲ್ಲ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಒತ್ತಾಯಿಸುತ್ತಿದ್ದಾರೆ.

Exit mobile version