Home ತಾಜಾ ಸುದ್ದಿ ಸ್ವಾಮೀಜಿ ಬಹಳ ಮಾತಾಡಿದ್ರ ಸಿಡಿ ಐತಿ ಅಂತಾರ

ಸ್ವಾಮೀಜಿ ಬಹಳ ಮಾತಾಡಿದ್ರ ಸಿಡಿ ಐತಿ ಅಂತಾರ

0

ಶಿಗ್ಗಾವಿ: ನಮ್ಮ ಸ್ವಾಮೀಜಿ ಬಹಳ ಮಾತಾಡಿದ್ರೆ ಸಾಕು ನಿಮ್ಮ ಗುರುಗಳದ್ದು ಸಿಡಿ ಐತಿ ಅಂತಾರ, ಸಿಡಿ ಅಂತ ಅಂದರ ಹೆದರಬೇಡಿ ಗುರುಗಳೇ ಅಂತ ನಾನು ಅಂದಿದ್ದೆ. ಈ ಮಕ್ಕಳದು ಸಿಡಿ ಫ್ಯಾಕ್ಟರಿ ಇದೆ. ಸಿಡಿ ಬಾಬಾಗಳು ಅದಾರ, ಸಿಎಂ ಸಹ ಬ್ಲ್ಯಾಕ್ ಮೇಲ್ ಮಾಡೋರನ್ನ ಕರೆದುಕೊಂಡ ಓಡಾಡ್ತಾ ಇದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖುರ್ಚಿ ಖಾಯಂ ಅಲ್ಲ ಖುರ್ಚಿ ಇದ್ದಲ್ಲೇ ಇರುತ್ತೆ. ಬರೋರ್ ಬರ್ತಾರ, ಎದ್ದು ಹೋಗೋರ್ ಎದ್ದು ಹೋಗ್ತಾರ ನಾನು ಸಿದ್ದೇಶ್ವರ ಸ್ವಾಮಿಗಳ ಭಕ್ತ ನೀವು ಯಾರನ್ನೂ ಬಿಡಲ್ಲ ಗೌಡ್ರೇ, ನಿಮಗೆ ಬಹಳ ಧೈರ್ಯ ಅಂತ ನನಗೆ ಸಿದ್ದೇಶ್ವರ ಸ್ವಾಮಿಗಳು ಹೇಳ್ತಾ ಇದ್ರು ಎಂದರು.
ಬೊಮ್ಮಾಯಿ ಸಾಹೇಬ್ರೇ ಯಾರೇ ರೊಕ್ಕ ಕೊಟ್ಟರೂ ನಮ್ಮ ಸ್ವಾಮಿಗಳು ತಗೊಳಲ್ಲ, ಇಂಥ ಸ್ವಾಮಿಗಳಿಗೆ ಏಕೆ ಹೀಗೆ ಮಾಡ್ತಾ ಇದ್ದೀರಿ. ಇಂದು ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡ್ತೀವಿ ನೀವೇನಾದರೂ ಜನರನ್ನು ರೊಚ್ಚಿಗೆಬ್ಬಿಸಿದರೆ, ಜನರನ್ನು ಪ್ರಚೋದನೆ ಮಾಡಿದರೆ ನಿಮ್ಮ ಅಂತ್ಯ ಆಗುತ್ತೆ. ನಮಗೆ ಬೊಮ್ಮಾಯಿಯವರ ಮೇಲೆ ವಿಶ್ವಾಸ ಇಲ್ಲ, ಇದಕ್ಕೆ ನ್ಯಾಯ ಸಿಗಬೇಕು ಅಂದರೆ ಪ್ರಧಾನಿಗೆ ಮನವಿ ಮಾಡ್ತಿದ್ದೇನೆ. ಪ್ರಧಾನಿ ಮೋದಿಯವರಿಗೆ ನಮ್ಮ ಗುರುಗಳಿಂದ ಪತ್ರ ಬರೆಸುತ್ತೇವೆ. ನಮ್ಮ ಹೋರಾಟ, ಏನೇನು ಅನ್ಯಾಯ ಆಗಿದೆ ಎಂದು ಪ್ರಧಾನಿಗಳಿಗೆ ಪತ್ರ ಬರೆಸುತ್ತೇವೆ ಎಂದು ಯತ್ನಾಳ ಹೇಳಿದರು.

Exit mobile version