Home ತಾಜಾ ಸುದ್ದಿ ಸೆಲೆಬ್ರಿಟಿಗಳ ಜತೆ ದರ್ಶನ್ ಸಂಭ್ರಮಾಚರಣೆ

ಸೆಲೆಬ್ರಿಟಿಗಳ ಜತೆ ದರ್ಶನ್ ಸಂಭ್ರಮಾಚರಣೆ

0

ಬೆಂಗಳೂರು: ಮೊನ್ನೆಯಷ್ಟೇ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರದ ಸಂಭ್ರಮಾಚರಣೆಯನ್ನು ಸೆಲೆಬ್ರಿಟಿಗಳ ಜತೆ ಆಚರಿಸಲು ನಟ ದರ್ಶನ್ ಮುಂದಾಗಿದ್ದಾರೆ.
ಹೌದು. 2023ರ ಅಭೂತಪೂರ್ವ ಸಿನಿಮಾವಾಗಿ ಹೊರ ಹೊಮ್ಮಿದೆ. ಇದರ ಖುಷಿ ಹಂಚಿಕೊಳ್ಳಲು ಖುದ್ದು ದರ್ಶನ್ ಬೆಂಗಳೂರಿನ ಒರಾಯನ್ ಮಾಲ್‌ಗೆ ಸಂಜೆ 5ಗಂಟೆಗೆ ಭೇಟಿ ನೀಡಲಿದ್ದಾರೆ. ತನ್ನ ನೆಚ್ಚಿನ ಸೆಲೆಬ್ರಿಟಿಗಳ ಜತೆ ಯಶಸ್ಸನ್ನು ಸಂಭ್ರಮಿಸಿ, ಮಾತನಾಡಲಿದ್ದಾರೆ. ಇವರೊಟ್ಟಿಗೆ ಚಿತ್ರತಂಡವೂ ಸಾಥ್ ನೀಡಲಿದೆ.
ಯಶಸ್ಸಿನ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ದರ್ಶನ್, “ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ-ಆಶೀರ್ವಾದಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ ❤️ ಈ ಪ್ರೀತಿಯ ಚಪ್ಪಾಳೆ ನಮ್ಮ #Kaatera ಚಿತ್ರತಂಡದ ಮನತುಂಬಿದೆ. Speechless 🙏” ಎಂದು ಬರೆದುಕೊಂಡಿದ್ದಾರೆ.

Exit mobile version