Home ತಾಜಾ ಸುದ್ದಿ ಸಿದ್ಧಾರೂಢ ಮಠದ ವಾತಾವರಣ ಮಾತೃವಾತ್ಸಲ್ಯದ ತೃಪ್ತಿ ನೀಡುತ್ತದೆ

ಸಿದ್ಧಾರೂಢ ಮಠದ ವಾತಾವರಣ ಮಾತೃವಾತ್ಸಲ್ಯದ ತೃಪ್ತಿ ನೀಡುತ್ತದೆ

0

ಹುಬ್ಬಳ್ಳಿ: ಸಿದ್ಧಾರೂಢ ಮಠದ ವಾತಾವರಣ ಮಾತೃವಾತ್ಸಲ್ಯದ ತೃಪ್ತಿ ನೀಡುತ್ತದೆ ಎಂದು ನಟ ಶರಣ್‌ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಹುಬ್ಬಳ್ಳಿಯ ಸಿದ್ದಾರೂಢ ಮಠ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾದದ್ದು ಮತ್ತು ಆತ್ಮೀಯವಾದದ್ದು, ನನ್ನ ತಂದೆ ತಾಯಿಯರು ಚಿಕ್ಕ ವಯಸ್ಸಿನಿಂದಲೂ ಮಠದ ಸಾನಿಧ್ಯದಲ್ಲೇ ಬೆಳೆದವರು, ನನ್ನ ವಿದ್ಯಾಭ್ಯಾಸವು ಕೂಡ ಹುಬ್ಬಳ್ಳಿಯಲ್ಲಿಯೇ ಜರುಗಿತು. ಸಿದ್ಧಾರೂಢ ಮಠದ ವಾತಾವರಣ ಮಾತೃವಾತ್ಸಲ್ಯದ ತೃಪ್ತಿ ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ.

Exit mobile version