Home ತಾಜಾ ಸುದ್ದಿ ಸಿಂಗಾಪುರ-ನಿಟ್ಟೂರು ಸೇತುವೆ ಕಾಮಗಾರಿಗೆ ಅನುದಾನ: ಸಿಎಂ ಭರವಸೆ

ಸಿಂಗಾಪುರ-ನಿಟ್ಟೂರು ಸೇತುವೆ ಕಾಮಗಾರಿಗೆ ಅನುದಾನ: ಸಿಎಂ ಭರವಸೆ

0
ಸಿಂಗಾಪುರ-ನಿಟ್ಟೂರು ಸೇತುವೆ

ಬಳ್ಳಾರಿ: ತುಂಗಭದ್ರಾ ನದಿಗೆ ಅಡ್ಡಲಾಗಿ ಸಿಂಗಾಪುರ ನಿಟ್ಟೂರು ಸೇತುವೆ ಕಾಮಗಾರಿಗೆ ಸಂಪೂರ್ಣ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಿರಗುಪ್ಪದಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.
ಸಂಸದ ಸಂಗಪ್ಪ ಕರಡಿ ಹಾಗೂ ಸೋಮಲಿಂಗಪ್ಪ ಅವರು ಬಹಳಷ್ಟು ಬೇಡಿಕೆಗಳನ್ನು ಇಟ್ಟಿದ್ದಾರೆ. ಬೈಪಾಸ್ ರಸ್ತೆ ಯೋಜನೆ ಸಿದ್ಧವಾಗುತ್ತಿದ್ದು ಬರುವ ದಿನಗಳಲ್ಲಿ ಅದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಿದೆ. ಒಳಚರಂಡಿ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಸರಬರಾಜು ಮಂಡಳಿಗೆ ಸೂಚಿಸಿದ್ದೇನೆ ಎಂದರು. ಸಿರಗುಪ್ಪ ತಾಲ್ಲೂಕಿನ ಅಭಿವೃದ್ಧಿಗೆ ಸಂಪೂರ್ಣ ವಾಗಿ ಅನುದಾನ ಒದಗಿಸಲು ನಮ್ಮ ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Exit mobile version