Home ತಾಜಾ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ವೈರಲ್‌

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ವೈರಲ್‌

0

ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿನಿಯರ ಟಾರ್ಗೆಟ್ ಮಾಡಿ ಅವಹೇಳನಕಾರಿ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಳಿನಗರದ ಕೆಲ ಕಾಲೇಜು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಹುಬ್ಬಳ್ಳಿ ವಿದ್ಯಾರ್ಥಿಯಿಂದ ಅವಹೇಳನಕಾರಿ ಪೋಸ್ಟ್ ವೈರಲ್ ಆಗಿದ್ದು, ಕಾಲೇಜು ಯುವತಿಯರ ಪೋಟೋ ಎಡಿಟ್ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ.

ಯುವಕ ಯುವತಿಯರನ್ನು ಟಾರ್ಗೆಟ್ ಮಾಡಿ ವೈರಲ್ ಮಾಡಿದ್ದು, ಉಡುಪಿ ಕಾಲೇಜು ಘಟನೆ ಮಾಸುವ ಮುನ್ನವೇ ಇಂತಹ ಘಟನೆ ನಡೆದಿರುವುದು ಪಾಲಕರಲ್ಲಿ ಭಯ ಹುಟ್ಟಿಸಿದೆ.
ಕಾಲೇಜೊಂದರ ಹೆಸರು ನೆಕ್ಸ್ಟ್ ಟಾರ್ಗೆಟ್ ಅಂತಾ ಪೋಸ್ಟ್ ವೈರಲ್ ಆಗದ ಕಾಲೇಜಿಗೆ ದಿಡೀರ್ ಆಗಿ ಡಿಸಿಪಿ ಗೋಪಾಲ ಬ್ಯಾಕೋಡ್ ನೇತೃತ್ವದ ತಂಡಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಯುವತಿಯರ ಕುರಿತು ಪೋಸ್ಟ್ ಮಾಡಿ, ದಮ್ ಇದ್ದರೆ ನನ್ನ ಹಿಡಿಯಿರಿ ಎಂದು ಪೋಸ್ಟ್ ಮಾಡಿರುವ ಕಿರಾತಕ.

Exit mobile version