Home ಅಪರಾಧ ಸಮಗ್ರ ತನಿಖೆ ನಡೆಸಿ ಸತ್ಯ ಬಯಲಿಗೆಳೆಯುತ್ತೇವೆ: ಎಡಿಜಿಪಿ ಅಲೋಕ್ ಕುಮಾರ್

ಸಮಗ್ರ ತನಿಖೆ ನಡೆಸಿ ಸತ್ಯ ಬಯಲಿಗೆಳೆಯುತ್ತೇವೆ: ಎಡಿಜಿಪಿ ಅಲೋಕ್ ಕುಮಾರ್

0
Alok Kumar

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಕುರಿತು ಯಾವುದೇ ಊಹಾಪೋಹ ನಂಬಲು ಸಾಧ್ಯವಿಲ್ಲ. ಸಮಗ್ರ ತನಿಖೆ ನಡೆಸಿ ಸತ್ಯ ಹೊರ ತರುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಹೊನ್ನಾಳಿಗೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರು ತಂದೆ ಎಂ.ಪಿ. ರಮೇಶ್ ದೂರು ದಾಖಲಿಸಿದ್ದಾರೆ. ಪೊಲೀಸ್ ತಂಡ ಮತ್ತು ಎಫ್ ಎಸ್ ಐಎಲ್ ತಂಡ ತನಿಖೆ ನಡೆಸುತ್ತಿದ್ದು, ಸಾಕ್ಷ್ಯ ಕಲೆ ಹಾಕಿಲಾಗುತ್ತಿದೆ. ಸಮಗ್ರ ತನಿಖೆ ನಡೆಸಿ ನಿಜಾಂಶ ಬಯಲಿಗೆಳೆಯುತ್ತೇವೆ ಎಂದರು.
ಚಂದ್ರು ಇದ್ದ ಕಾರು 100 ಕಿಮೀ ಸ್ಪೀಡ್ ನಲ್ಲಿ ಚಲಾವಣೆಗೊಂಡಿದೆ. ಭಾನುವಾರ ತಡರಾತ್ರಿ 12:30 ನಿಮಿಷಕ್ಕೆ ಕಾರು ಪಲ್ಟಿಯಾಗಿದ್ದು, ನ್ಯಾಮತಿ ಬಳಿ ಸಿಸಿ ಟಿವಿಯಲ್ಲಿ ಕಾರು ಪತ್ತೆಯಾಗಿತ್ತು. ತನಿಖೆ ಕುರಿತು ಎಫ್ ಎಸ್ ಐಎಲ್ ಟೀಮ್ ಜೊತೆ ಮಾತನಾಡುತ್ತಿದ್ದೇವೆ. ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Exit mobile version