Home ತಾಜಾ ಸುದ್ದಿ ಶ್ರೀರಂಗಪಟ್ಟಣದಲ್ಲಿ ಮುಂದುವರೆದ ಪ್ರತಿಭಟನೆ : ವಿವಿಧ ಪ್ರಗತಿ ಪರ ಸಂಘಟನೆಗಳಿಂದ ಬೈಕ್ ಜಾಥಾ – ಕೈ...

ಶ್ರೀರಂಗಪಟ್ಟಣದಲ್ಲಿ ಮುಂದುವರೆದ ಪ್ರತಿಭಟನೆ : ವಿವಿಧ ಪ್ರಗತಿ ಪರ ಸಂಘಟನೆಗಳಿಂದ ಬೈಕ್ ಜಾಥಾ – ಕೈ ಶಾಸಕ‌ ಸಾಥ್

0

ಶ್ರೀರಂಗಪಟ್ಟಣ: ತಮಿಳುನಾಡಿಗೆ‌ ನೀರು ಹರಿಸಿದ ಸರ್ಕಾರದ‌ ಕ್ರಮವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ವಿವಿಧ ಪ್ರಗತಿ ಪರ ಸಂಘಟನೆಗಳು ಭಾನುವಾರ ನಡೆಸಿದ ಬೈಕ್ ಜಾಥಾಗೆ ಕೈ ಶಾಸಕ‌ ರಮೇಶ್ ಬಂಡಿಸಿದ್ದೇಗೌಡ ಚಾಲನೆ ನೀಡಿ ಪ್ರತಿಭಟನೆಗೆ ಸಾಥ್ ನೀಡಿದರು.
ಕಾವೇರಿ ನಿರ್ವಹಣಾ ಸಮಿತಿ‌ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಲಾಗಿದೆ. ಕಾವೇರಿ ಜಲಾಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗದೆ, ಅಣೆಕಟ್ಟೆಗಳು ಭರ್ತಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಬಿಡಬೇಕೆಂಬುದು ಸರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಂಡು ರಾಜ್ಯದ ಹಿತ ಕಾಪಾಡಬೇಕು. ರೈತರ ಹೋರಾಟಕ್ಕೆ ನಾನು ಸದಾ ಸಿದ್ದನಿದ್ದು, ಹೋರಾಟಗಾರರ ಬೆಂಬಲಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಶಾಸಕ‌ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.


ಪಟ್ಟಣದ ಕುವೆಂಪು ವೃತ್ತದ ಬಳಿ ರೈತ ಸಂಘದಿಂದ ಪ್ರತಿಭಟನೆ ಮುಂದುವರೆದಿದ್ದು, ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಕ್ ಜಾಥಾ ನಡೆಸಿ ನೀರು ಬಿಟ್ಟ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

Exit mobile version