Home ತಾಜಾ ಸುದ್ದಿ ಶೆಟ್ಟರ್ ಸ್ಪರ್ಧೆ ವರಿಷ್ಠರ ತೀರ್ಮಾನ

ಶೆಟ್ಟರ್ ಸ್ಪರ್ಧೆ ವರಿಷ್ಠರ ತೀರ್ಮಾನ

0


ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಘರ್ ವಾಪ್ಸಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಸ್ವಾಗತ ಮಾಡುತ್ತೇವೆ. ಶೆಟ್ಟರ್ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಅದಕ್ಕೆ ನಾವು ಬದ್ಧರಿದ್ದೇವೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ‌ರಾಜಿನಾಮೆ ವಿಚಾರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬರಬೇಕು ಅಂದ್ರೆ ರಾಜೀನಾಮೆ ಕೊಡಲೇಬೇಕು. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆಸುಕೊಂಡಿಲ್ಲ ಹೈಕಮಾಂಡ್ ಎಂಬ ವಿಚಾರ ಆ ರೀತಿಯಾಗಿಲ್ಲ. ನಾಲ್ಕು ಚೌಕಟ್ಟಿನ ನಡೆಯುವ ಸಂಧಾನ ಇದು.ಮಾತುಕತೆ ನಡೀತಾ ಇರುತ್ತೆ ಅವುಗಳನ್ನು ಬಹಿರಂಗ ಪಡಿಸಲಾಗೋದಿಲ್ಲ. ಎಲ್ಲರನ್ನು ತೆಗೆದುಕೊಂಡೆ ಪಕ್ಷ ನಿರ್ಧಾರ ಮಾಡಿರುತ್ತಾರೆ ಎಂದರು.

ಟೆಂಗಿನಕಾಯಿ, ಶೆಟ್ಟರ್ ಅಸಮಾಧಾನ ವಿಚಾರ, ಪಕ್ಷದಲ್ಲಿದ್ದಾಗ ಅಂತಹದ್ಯಾವುದು ಇರಲ್ಲ. ಕಾಂಗ್ರೆಸ್ ನಲ್ಲಿದ್ದಾಗ ಬಿಜೆಪಿ ಕಾಂಗ್ರೆಸ್ ಟೀಕೆ ಮಾಡೋದು ಸಹಜ. ಈಗ ಪಕ್ಷಕ್ಕೆ ಸೇರಿದ್ದಾರೆ ಎಲ್ಲರೂ ಕೂಡಿ ಇರುತ್ತೇವೆ ಎಂದರು.

Exit mobile version