Home ತಾಜಾ ಸುದ್ದಿ ಶಾಸಕರಿಗೆ ಮಾತೃ ವಿಯೋಗ

ಶಾಸಕರಿಗೆ ಮಾತೃ ವಿಯೋಗ

0

ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ತಾಯಿ, ಉಳಿಪಾಡಿಗುತ್ತು ಸರೋಜಿನಿ ನಾಯ್ಕ್(೯೦) ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ನಿಧನರಾದರು.
ಸರೋಜಿನಿ ಅವರು ಪೊಳಲಿ ದೇವಸ್ಥಾನದ ಆಡಳಿತದ ಒಂದು ಮನೆತನವಾದ ಉಳಿಪ್ಪಾಡಿಗುತ್ತು ದಿ.ರಮೇಶ್ ನಾಯ್ಕ್ ಅವರ ಪತ್ನಿ. ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ರಾತ್ರಿ ಸುಮಾರು ೧೦ ಗಂಟೆ ವೇಳೆ ಒಡ್ಡೂರು ಫಾರ್ಮ್ಸ್‌ನ ಪುತ್ರ, ಶಾಸಕ ರಾಜೇಶ್ ನಾಯ್ಕ್ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

Exit mobile version