Home ನಮ್ಮ ಜಿಲ್ಲೆ ಚಿತ್ರದುರ್ಗ ಶಾಲೆಯಲ್ಲಿ ತಲೆ ಬುರುಡೆ ಇಟ್ಟು ವಾಮಾಚಾರ

ಶಾಲೆಯಲ್ಲಿ ತಲೆ ಬುರುಡೆ ಇಟ್ಟು ವಾಮಾಚಾರ

0

ಚಿತ್ರದುರ್ಗ: ಶಾಲಾ ಮುಖ್ಯ ಶಿಕ್ಷಕರ ಕೊಠಡಿ ಬಳಿ ತಲೆ ಬುರುಡೆ ಇಟ್ಟು ವಾಮಾಚಾರ ಮಾಡಿರುವ ಘಟನೆ ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದ ಘಟನೆ ಇಂದು ಬೆಳಕಿಗೆ ಬಂದಿದೆ, ತಲೆ ಬುರುಡೆ, ನಿಂಬೆಹಣ್ಣು, ಎಲೆ ಅಡಿಕೆ, ಕುಂಕುಮ ಬಳಸಿ ವಾಮಾಚಾರ ಮಾಡಿದ್ದು ಶಾಲೆಯಲ್ಲಿ ಶಿಕ್ಷಕರ ಮೇಲಿನ ದ್ವೇಷಕ್ಕೆ ವಾಮಾಚಾರ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯದಿಂದ ವಿಧ್ಯಾರ್ಥಿಗಳು & ಪೊಷಕರಲ್ಲಿ ಆತಂಕ ಮೂಡಿದ್ದು ಘಟನಾ ಸ್ಥಳಕ್ಕೆ ತಳಕು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version