ಕೆಲವೊಂದು ಬಾರಿ ಹಿರಿಯರು ತಿಳಿವಳಿಕೆ ಇಲ್ಲದ ಅಜ್ಞಾನಿಯಾದ ಬಾಲಕನಿಂದ ದಾನ ಕೊಡಿಸುತ್ತಾರೆ. ಇದು ಮುಂದೊಂದು ಕಾಲಕ್ಕೆ ಅಂದರೆ ಪ್ರಜ್ಞೆ ಬಂದಾಗ ನೀಡುವ ಸ್ವಭಾವ ಮೂಡಲಿ ಎಂಬುದಾಗಿರುತ್ತದೆ. ಆದರೆ ಇದು ರೂಢಿಯಾಗಿರುವದರಿಂದ ದಾನದ ಫಲ ಆ ಬಾಲಕನಿಗೆ ತಟ್ಟುವದಿಲ್ಲ. ದಾನವೆಂದರೆ ಏನು? ಅದರ ಮಹತ್ವವೇನು ? ಯಾರಿಗೆ ದಾನ ಪ್ರದಾನ ಮಾಡಬೇಕು ಎಂಬುವುದು ಅರಿವಿಲ್ಲ. ಏನಿದು ಪವಿತ್ರವಾದ ದೇಶ ಕಾಲ ಪರ್ವಕಾಲ ಯಾವುದರ ಅರಿವಿಲ್ಲ. ಮುಖ್ಯವಾಗಿ ತಿಳಿಬೇಕಾದದ್ದು ಭಗವಂತನ ಮಹಿಮೆ ಮತ್ತು ಭಗವಂತನ ಆದೇಶವಿದೆ. ದಾನವೊಂದು ವಿಹಿತವಾದ ಕರ್ಮ. ಅಂತರ್ಯಾಮಿಯಾಗಿ ಭಗವಂತ ನಮ್ಮೊಳಗಿದ್ದು ದಾನವನ್ನು ಮಾಡಿಸುತ್ತಿದ್ದಾನೆ ಎಂಬುದರ ಅರಿವು ಮಗುವಿಗೆ ಇರುವುದಿಲ್ಲ.
ಅಜ್ಞಾನದ ಅವಸ್ಥೆಯಲ್ಲಿ ದಾನ ಫಲ ನೀಡುವದಿಲ್ಲ. ದಾನದ ಬಗ್ಗೆ ಜಿಜ್ಞಾಸೆ ಇಲ್ಲದ ಹಿರಿಯರಿಂದಲೂ ದಾನ ಮಾಡಿದಾಗಲೂ ದಾನದ ಫಲ ಬರುವದಿಲ್ಲ. ಅಲ್ಲದೇ ಸ್ವಾರ್ಥದಲ್ಲಿ ರತನಾದ ಮನುಷ್ಯ
ಭಗವತ್ ತತ್ವದ ಚಿಂತನ ಧರ್ಮಶಾಸ್ತ್ರದ ಚಿಂತನದಂತೆ ದಾನ ಮಾಡುವದಿಲ್ಲ. ಹೀಗಾಗಿ ಅಂಥ ದಾನಕ್ಕೆ ಮಹತ್ವ ಇರುವದಿಲ್ಲ. ಇತಿಹಾಸ ಪುರಾಣಗಳಲ್ಲಿ ಹೇಳಿದಂತಹ ಅನೇಕ ದಾನ ಧರ್ಮದಿಗಳ ಮಹತ್ವವನ್ನು ತಿಳಿದುಕೊಳ್ಳಬೇಕೆಂಬ ಆಸ್ಥೆಯೂ ಇಲ್ಲ. ಒಟ್ಟಾಗಿ ಅಜ್ಞಾನ ಕವಿದಿದೆ ಅಜ್ಞಾನದ ಮನಸ್ಸಿನಲ್ಲಿ ಜ್ಞಾನವನ್ನು ಮಾಡುತ್ತಾರೆ ಅಂತಹ ದಾನದ ಫಲವೇನು ಎಂಬುದು ಪ್ರಶ್ನೆ.
ತಿಳಿವಳಿಕೆ ಇಲ್ಲದೆ ಮಾಡಿದ ಜ್ಞಾನ ಅದರ ಫಲವನ್ನು ಅವನು ಅನುಭವಿಸುತ್ತಾನೆ. ಹೇಗೆಂದರೆ ಜೀವ ತಾಯಿಯ ಗರ್ಭದಲ್ಲಿರುವಾಗಲೂ ಅವನಿಗೆ ಬೇಕಾದಷ್ಟು ಸುಖವಿರುತ್ತದೆ. ತಾಯಿ ಗರ್ಭದಲ್ಲಿ ಇರುವಾಗ ತಾಯಿ ತಿಂದ ಆಹಾರದ ಅಂಶಗಳು ಗರ್ಭದಲ್ಲಿದ್ದ ಶಿಶುವಿಗೆ ಮುಟ್ಟಬೇಕಾದರೂ ಕೂಡ ಪುಣ್ಯ ಇರಬೇಕು. ಆ ಪುಣ್ಯ ಯಾವುದು ಎಂದರೆ ಇವನು ತಿಳಿವಳಿಕೆ ಇಲ್ಲದೆ ಮಾಡಿದ ಯಾವದೋ ಜನ್ಮದ ಅಜ್ಞಾನದ ದಾನದ ಫಲ ಗರ್ಭದಲ್ಲಿ ಆಹಾರ ಸಿಗುತ್ತದೆ. ಎಷ್ಟು ಸೂಕ್ಷವಲ್ಲವೋ ಪ್ರಕೃತಿ ನಿಯಮ ಎಂದು ಕೃಷ್ಣ ದೇವರು ಗೀತೆಯಲ್ಲಿ ಬೋಧಿಸಿದ್ದಾರೆ.
ಅಲ್ಪಜ್ಞಾನವಿದ್ದಾಗಲೂ ಇನ್ನೊಬ್ಬರು ಕೊಟ್ಟ ದಾನಕ್ಕಿಂತ ನಾನು ದಾನ ಹೆಚ್ಚು ಕೊಡಬೇಕು ನನ್ನ ಹೆಸರು ಬರಬೇಕು ನನಗೆ ಪ್ರಸಿದ್ಧಿ ಬರಬೇಕು ಎನ್ನುವ ಇರ್ಷಾ ಮಾತ್ಸರ್ಯದ ಮೊದಲಾದ ಭಾವನೆಗಳಿಂದ ಕೊಟ್ಟ ಯಾವದೋ ಜನ್ಮದ ದಾನ ಫಲವನ್ನು ಬಾಲ್ಯದಲ್ಲಿ ಪಡೆಯುತ್ತಾನೆ. ಇನ್ನು ಕೆಲವರು ವೃದ್ಧಾಪ್ತದಲ್ಲಿ ರೋಗರುಜಿ ನಗಳಿಂದ ಬಳಲಿ ಕೆಲವರು ದಾನ ಮಾಡುತ್ತಾರೆ. ಅಂತಹ ಅವಸ್ಥೆಯಲ್ಲಿ ದಾನ ಮಾಡಿದರೆ ಜನ್ಮಂತರದಲ್ಲಿಯೂ ಕೂಡ ಅವನಿಗೆ ದಾನದ ಫಲ ಚಿಕ್ಕ ವಯಸ್ಸಿನಲ್ಲಿ ದಾರಿದ್ರ ತಾರುಣ್ಯದಲ್ಲಿ ಹಾಗೂ ಹೀಗೋ ಜೀವನ ನಡೆಸುತ್ತಾರೆ ಇನ್ನೇನು ಉಣ್ಣಲು ಶಕ್ತಿ ಇಲ್ಲದಾಗ ಬೇಕಾದಷ್ಟು ಯಾವುದೋ ಒಂದು ರೀತಿಯ ಸಂಪತ್ತು ಬಂದು ಬಿಡುತ್ತದೆ. ಹಾಗಾದರೆ ಜನ ಮಾಡಲು ಇಷ್ಟು ತಡ ಮಾಡಿದೆಯಾ? ನಿನಗೆ ಫಲ ಕೊಡುವುದು ನಾವು ತಡವಾಗಿ ಕೊಡುತ್ತೇವೆ. ಮುಂದಿನ ಜನ್ಮದಲ್ಲಾದರೂ ಧರ್ಮವನ್ನು ಸರಿಯಾಗಿ ಆಚರಣೆ ಮಾಡು ಎಂದು ಭಗವಂತ ತೋರಿಸಿಕೊಡುತ್ತಾನೆ.