Home ತಾಜಾ ಸುದ್ದಿ ವಿವಾದಾತ್ಮಕ ವಿಷಯಗಳಿಗೆ ಬಿಜೆಪಿ ಆದ್ಯತೆ

ವಿವಾದಾತ್ಮಕ ವಿಷಯಗಳಿಗೆ ಬಿಜೆಪಿ ಆದ್ಯತೆ

0

ವಿಜಯಪುರ: ವಿವಾದಾತ್ಮಕ ವಿಷಯಗಳಿಗೆ ಬಿಜೆಪಿ ಆದ್ಯತೆ, ಹತ್ಯೆ ಘಟನೆಯಲ್ಲಿ ರಾಜಕೀಯ ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಎಂ.ಕಲಬುರಗಿ, ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಿಲುವೇನಿತ್ತು ಎಂದು ಪ್ರಶ್ನಿಸಿದ ಸಚಿವ ಲಾಡ್, ಮೋದಿ ಸರ್ಕಾರದ ಅವಧಿಯಲ್ಲಿ ಎಷ್ಟು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಾದಾತ್ಮಕ ವಿಷಯಗಳಿಗೆ ಬಿಜೆಪಿ ಆದ್ಯತೆ, ಹತ್ಯೆ ಘಟನೆಯಲ್ಲಿ ರಾಜಕೀಯ ಸರಿಯಲ್ಲ. ದೇಶದಲ್ಲಿ ಲಕ್ಷಾಂತರ ಮಹಿಳೆಯರು ಕಾಣೆಯಾಗುತ್ತಿರುವುದು ಮಾತ್ರವಲ್ಲ, ಗುಜರಾತಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಮಾತನಾಡಲಿ ಎಂದರು. ದಿಂಗಾಲೇಶ್ವರ ಶ್ರೀಗಳಿಗೆ ಸ್ಪರ್ಧೆ ಪೇಮೆಂಟ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ ಯತ್ನಾಳ್ ಸಾಹೇಬರು ಯನಿವರ್ಸಲ್ ಗುರು, ದಿಂಗಾಲೇಶ್ವರ ಶ್ರೀಗಳಿಗೆ ಸ್ಪರ್ಧೆ ಮಾಡಲು ಯಾರು ರೊಕ್ಕ ಕೊಟ್ಟರು, ಯಾವ ನೋಟು ಕೊಟ್ಟರೆಂದು ಯತ್ನಾಳರನ್ನೇ ಕೇಳಿ. ಅವರು ಕೊಡುವ ಹಾರಿಕೆ ಉತ್ತರಕ್ಕೆ ನಮ್ಮನ್ನು ಪ್ರಶ್ನಿಸುತ್ತೀರಿ ಎಂದರು.

Exit mobile version