Home ತಾಜಾ ಸುದ್ದಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ?

ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ?

0

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ? ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರಶ್ನಿಸಿದ್ದಾರೆ.
PSI ಅಭ್ಯರ್ಥಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು 545 PSI ಹುದ್ದೆಯ ಅಂತಿಮ ಅಂಕಪಟ್ಟಿಯನ್ನು KEA ಗೃಹ ಇಲಾಖೆಗೆ ಸಲ್ಲಿಸಿ 4 ತಿಂಗಳು ಕಳೆದರೂ, KSP ಇಲಾಖೆ ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ! ಇದು PSI ಅಭ್ಯರ್ಥಿಗಳಿಗೆ ತೀವ್ರ ತೊಂದರೆ ಉಂಟುಮಾಡಿದ್ದು, ಅವರು ತಮ್ಮ ಅಳಲನ್ನು ನನ್ನಲ್ಲಿ ತೋಡಿಕೊಂಡಿದ್ದಾರೆ!
ಸದರಿ ನೇಮಕಾತಿ ಆರಂಭಗೊಂಡು 4 ವರ್ಷ ಕಳೆದಿದೆ! ಇದರಿಂದ ವಿದ್ಯಾರ್ಥಿಗಳ ಜೀವನ ಅತಂತ್ರಗೊಂಡಿದೆ! ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ? ಗೃಹ ಸಚಿವರಾದ ಡಾ ಪರಮೇಶ್ವರ ಅವರೇ, ತಾವು ಶೀಘ್ರವೇ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡುವಂತೆ KSP ಇಲಾಖೆಗೆ ಸೂಚಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಬೇಕು! ಎಂದಿದ್ದಾರೆ.

Exit mobile version