Home ತಾಜಾ ಸುದ್ದಿ ವಕ್ಫ್ ನಿಷೇಧಕ್ಕೆ ಕಾಂಗ್ರೆಸ್ ಸಿದ್ಧವಿಲ್ಲ

ವಕ್ಫ್ ನಿಷೇಧಕ್ಕೆ ಕಾಂಗ್ರೆಸ್ ಸಿದ್ಧವಿಲ್ಲ

0

ರಬಕವಿ-ಬನಹಟ್ಟಿ: ದೇಶಾದ್ಯಂತ ವಕ್ಫ್‌ ವಿಕಾರ ಸ್ವರೂಪ ಭಯಾನಕವಾಗಿ ಚಾಚಿ ರಾಕ್ಷಸರೂಪ ತಾಳುತ್ತಿದೆ. ಕೇಂದ್ರ ಸರ್ಕಾರದ ಜೆಪಿಸಿ ಕಮಿಟಿಯು ಚಳಿಗಾಲ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿಗೆ ಚರ್ಚಿಸಲಿದೆ. ಅದಕ್ಕೂ ಪೂರ್ವದಲ್ಲಿ ಈ ಕುತಂತ್ರ ನಡೆಸಿ, ಸರ್ಕಾರ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ಸಿದ್ದು ಸವದಿ ಹರಿಹಾಯ್ದರು.
ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ, ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸಚಿವ ಜಮೀರ್‌ ಅಹ್ಮದ್ ಜೊತೆ ಸಿಎಂ ಸಿದ್ದರಾಮಯ್ಯ ಶಾಮೀಲಾಗಿ ಇಂತಹ ರೈತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬ್ರಿಟಿಷ್ ಕಾಲದ ದುರುದ್ಧೇಶ ಯೋಜನೆ ಮುಂದುವರೆಸಿಕೊಂಡು ತುಷ್ಠೀಕರಣ, ಮತ ಬ್ಯಾಂಕ್ ಸಲುವಾಗಿ ಕಾಂಗ್ರೆಸ್‌ನಿಂದ ರೈತರ ಮರಣ ಶಾಸನ, ಕಾನೂನು ತರುವಲ್ಲಿ ಹಾತೊರೆಯುತ್ತಿದ್ದಾರೆ ಎಂದು ಕಿಡಿಕಾರಿದರು.

Exit mobile version