Home ತಾಜಾ ಸುದ್ದಿ ಲಿಂಗಾಯತರ ವಿರುದ್ಧ ಸೇಡಿನ ಮನೋಭಾವ ಸರಿಯಲ್ಲ

ಲಿಂಗಾಯತರ ವಿರುದ್ಧ ಸೇಡಿನ ಮನೋಭಾವ ಸರಿಯಲ್ಲ

0

ಧಾರವಾಡ: ಯಾವುದೇ ಜಾತಿ, ಧರ್ಮದವರನ್ನು ರಾಜ್ಯ ಸರ್ಕಾರ ಕಡೆಗಣಿಸುವ ಸೇಡಿನ ಮನೋಭಾವನೆ ಸರಿಯಲ್ಲ ಎಂದು ಕುಂಬಳಗೂಡಿನ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಹಿರಿಯ ರಾಜಕಾರಣಿ ಶಾಮನೂರ ಶಿವಶಂಕರಪ್ಪ ಅವರ ಹೇಳಿಕೆ ಕುರಿತು ಅಭಿಪ್ರಾಯ ಹಂಚಿಕೊಂಡರು. ಶಾಮನೂರ ಶಿವಶಂಕರಪ್ಪ ರಾಜ್ಯದಲ್ಲೇ ಹಿರಿಯ ರಾಜಕಾರಣಿ. ಅವರು ಸುಮ್ಮನೇ ಹೇಳಿಕೆ ನೀಡುವುದಿಲ್ಲ. ವೀರಶೈವ ಲಿಂಗಾಯತರನ್ನು ಕಡೆಗಣಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ. ಸ್ಥಿತಿ ಗತಿ ಅವಲೋಕಿಸಿಯೇ ಹೇಳಿಕೆ ನೀಡಿದ್ದಾರೆ. ಶಿವಶಂಕರಪ್ಪ ಕಾಂಗ್ರೆಸ್ ಶಾಸಕರಾಗಿದ್ದರೂ ಕಾಂಗ್ರೆಸ್ ಸರಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದರು.
ಯಾವುದೇ ಪಕ್ಷದ ಸರಕಾರವಿರಲಿ, ಯಾವುದೇ ಜಾತಿ, ಧರ್ಮದವನ್ನು ಕಡೆಗಣಿಸುವುದು ಸೂಕ್ತವಲ್ಲ. ಎಲ್ಲ ಜಾತಿ, ಧರ್ಮದ ಜನರು ಮತ ಹಾಕಿರುತ್ತಾರೆ ಎಂಬುದನ್ನು ಮರೆಯಬಾರದು. ಎಲ್ಲ ಜಾತಿ, ಧರ್ಮದವರು ಎಲ್ಲ ಪಕ್ಷಗಳಲ್ಲಿಯೂ ಇರುತ್ತಾರೆ. ಕಾಂಗ್ರೆಸ್ ಸರಕಾರದಲ್ಲಿ ೭ ಸಚಿವರು ವೀರಶೈವ ಲಿಂಗಾಯತರಿದ್ದಾರೆ. ಆದರೆ ಅಧಿಕಾರಿಗಳನ್ನು ಕಡೆಗಣಿಸಬಾರದು. ರಾಜ್ಯ ಸರಕಾರ ವೀರಶೈವ ಲಿಂಗಾಯತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

Exit mobile version